JATRA MAHOTSAVA: ಹೊಸನಗರ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ…

ಹೊಸನಗರ: ಪಟ್ಟಣದ ಪ್ರಸಿದ್ಧ ಶ್ರೀ  ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದ್ದು ಮಂಗಳವಾರ ಶ್ರೀ ಗಣಪತಿ ದೇವಸ್ಥಾನದಿಂದ ವಿಶೇಷ ಪೂಜೆಯ ಮೂಲಕ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನ ಮೂರ್ತಿಯನ್ನು ಮೆರವಣಿಗೆ ಮೂಲಕವಾಗಿ ಮಾರಿಕಾಂಬ ದೇವಿಯ ತವರು ಮನೆಯಾದ  ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾ೦ಭ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು. ಇಂದು ರಾತ್ರಿಯವರೆಗೆ ದೇವಿಯ ತವರು ಮನೆಯಲ್ಲಿ ವಿಶೇಷ ಪೂಜೆ ಹಾಗೂ ಉಡಿ ತುಂಬುವ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು ರಾತ್ರಿ ದೇವಿಯ ಮೂರ್ತಿಯನ್ನು  ಮಾರಿಗುಡ್ಡದಲ್ಲಿರುವ ದೇವಿಯ ಗಂಡನ ಮನೆಯೆಂದು ಖ್ಯಾತಿ ಪಡೆದಿರುವ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಬುಧವಾರದಿಂದ ಪ್ರತಿಷ್ಠಾಪಿಸಿ ಎಂಟು ದಿನಗಳ ಕಾಲ ಅಲ್ಲಿ ದೇವಿಯನ್ನು ಪೂಜಿಸಲಾಗುವುದು.

  ಪ್ರತಿದಿನ ರಾತ್ರಿ 8ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು ಪ್ರತಿದಿನ ಸಂಜೆ ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯಲಿದೆ.ಹಾಗೆಯೇ 22-01-2026ನೇ ಗುರುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು ಹೊಸನಗರ-ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣರವರು ಈ ಕಾರ್ಯಕ್ರಮವನ್ನು ಉದ್ಗಾಟಿಸಲಿದ್ದಾರೆ ಈ ಸಮಾರಂಭದ ಅಧ್ಯಕ್ಷತೆಯನ್ನು ದತ್ತಾತ್ರೇಯರವರು ವಹಿಸಲಿದ್ದು ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ,ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್, ನಗರ ಮಹಾದೇವಪ್ಪ ಆಗಮಿಸಲಿದ್ದು ಪದ್ಮ ಅನಾಥಶ್ರಮದ ವ್ಯವಸ್ತಾಪಕ ಪ್ರಬಾಕರ್ ಹಾಗೂ ಗಿನ್ನಿಸ್ ವಲ್ಡ್ ರೆಕಾರ್ಡ್ ಕವನಶ್ರೀ, ಯೋಧ ಸ್ಮರಣೆ ಶ್ರೀ ಮಂಜುನಾಥ್ ಜೆ. ಸಂಕೂರು ಅವರಿಗೆ ಸನ್ಮಾನಿಸಲಿದ್ದಾರೆ. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತೀಕ ಕಾರ್ಯಕ್ರಮ ನಡೆಯಲಿದೆ.
ವಿವಿಧ ಆಟೋಟಗಳು ಈ ಬಾರೀ ಮಕ್ಕಳಿಗಾಗಿ ರ‍್ಯಾಂಬೋ ಅಮ್ಯೂಸ್‌ನವರಿಂದ ರೋಮಾಂಚಕಾರಿ ಮೈ ಜುಂ ಎನ್ನುವ ಜಾಯಿಂಟ್‌ವೀಲ್, ಕೋಲಂಬಸ್, ಬ್ರೇಕ್ ಡ್ಯಾಸ್ಸ್, ಮಾರುತಿ ಡೂಮ್, ಮಕ್ಕಳ ರೈಲು ಮ್ಯಾಜಕ್ ಷೋ ಡಾಗ್ ಷೋ ಹಾಗೂ ಇನ್ನೂ ಹತ್ತು ಹಲವಾರು ರೀತಿ ವಿಶೇಷ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.

JATRA MAHOTSAVA...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe