PRESIDENT:SOCIETY:ಕಳೂರು ಶ್ರೀ ರಾಮೇಶ್ವರ ಸಹಕಾರಿ ಸಂಘದ ಅಧ್ಯಕ್ಷರಾಗಿ ಡಿ.ಆರ್.ವಿನಯ್ ಕುಮಾರ್ ಅವಿರೋಧ ಆಯ್ಕೆ…

ಹೊಸನಗರ: ಸಂಕ್ರಾಂತಿ  ದಿನದಂದು ಇಲ್ಲಿನ ಡಿಸಿಸಿ  ಬ್ಯಾಂಕಿನ ಸಭಾಂಗಣದಲ್ಲಿ  ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯಗೆ ಚಾಲನೆ ದೊರೆಯಿತು.
ಅಧ್ಯಕ್ಷ ಸ್ಥಾನಕ್ಕೆ ಡಿ.ಆರ್. ವಿನಯ್ ಕುಮಾರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಆರ್. ಚಿನ್ನಪ್ಪ ಹೊರತು ಬೇರಾವುದೇ ನಾಮಪತ್ರ ಸಲ್ಲಿಕೆಯಾಗದ ಕಾರಣ ,  ಮುಖ್ಯ ಚುನಾವಣಾಧಿಕಾರಿ ವಿನಾಯಕ ನಾವಡ ಅವರು ಫಲಿತಾಂಶ ಘೋಷಿಸಿದರು.

ಸತತ ಮೂರನೇ ಬಾರಿಗೆ ಸಂಘದ ಅಧ್ಯಕ್ಷ ಸ್ಥಾನ ವಿನಯ್ ಕುಮಾರ್ ಅಲಂಕರಿಸಿದರೆ, ಎರಡನೆಯ ಬಾರಿಗೆ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಜಿ.ಆರ್. ಚಿನ್ನಪ್ಪ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ನಂತರ, ನೂತನ  ಅಧ್ಯಕ್ಷ ದುಮ್ಮ ವಿನಯ್ ಕುಮಾರ್  ಪತ್ರಕರ್ತರೊಂದಿಗೆ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು. ಕಳೂರು, ಮುಂಬಾರು ಸೇರಿದಂತೆ ತಾಲ್ಲೂಕಿನ ಕೆಲವು ಸಂಘದಲ್ಲಿ ಈ ಬಾರಿ ಚುನಾವಣೆ ನಡೆದಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರಕ್ಕೆ ಚುನಾವಣೆ ನಡೆದಯಂತೆ ತಡೆಯುವ ಮನೋ ಸಂಕಲ್ಪ ಸದಸ್ಯರು ಹೊಂದಬೇಕಿದೆ. ಇದರಿಂದ ಸಂಘಕ್ಕೆ ತಗಲುವ ಆರ್ಥಿಕ ನಷ್ಟ ತಪ್ಪಿಸಲು ಸಹಕಾರಿ ಆಗಲಿದೆ. ಚುನಾವಣೆಯನ್ನು ಯಾವೊಬ್ಬ ಸದಸ್ಯರು ವೈಯಕ್ತಿಕ ಪ್ರತಿಷ್ಠೆಯಾಗಿ ಪರಿಗಣಿಸಬಾರದೆಂದು ವಿನಂತಿಸಿದ ಅವರು, ಸಂಘದ ಹಿರಿಯರ ಮಾರ್ಗದರ್ಶನ, ಸದಸ್ಯರ ಸಹಕಾರವೇ ಈ ಬಾರಿ ತಾವು ಅಧ್ಯಕ್ಷ ಗಾಧಿ ಏರಲು ಕಾರಣವೆಂದರು. ಸಹಕಾರಿ ಧುರೀಣ ಡಾ. ಆರ್.ಎಂ. ಮಂಜುನಾಥ ಗೌಡರ ನಿರಂತರ ಪ್ರೋತ್ಸಾಹ, ಸಲಹೆ ,ಸಹಕಾರಗಳೇ ತಾವು ಸಹಕಾರಿ ಕ್ಷೇತ್ರದಲ್ಲಿ ಒಂದಿಷ್ಟು ಸಾಧಿಸಲು ಸಾಧ್ಯವಾಯಿತು ಎಂಬುದಾಗಿ ಆರ್ ಎಂ ಎಂ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು.


ಇದೇ ಸಂದರ್ಭದಲ್ಲಿ ಶಿಮೊಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ, ಬಾಲಾಜಿ ಇಂಡೇನ್ ಗ್ಯಾಸ್ ಮಾಲೀಕ ಜಗದೀಶ್, ಗುರುಶಕ್ತಿ ಪೆಟ್ರೋಲ್ ಬಂಕ್ ಮಾಲೀಕ ರಾಘವೇಂದ್ರ, ಗುರುಶಕ್ತಿ ಬಸ್ ಮಾಲೀಕ ಸುಹಾಸ್, ಮೇಲಿನಬೆಸಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಹೀರೋ ಹೊಂಡಾ ಶೋ ರೂಂ ಮಾಲೀಕ ಮಲ್ಲಿಕಾ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ತಾ.ಪಂ.ಮಾಜಿ ಸದಸ್ಯ ಏರಗಿ ಉಮೇಶ್, ಪ್ರಮುಖರಾದ ಬಿ.ಆರ್. ಪ್ರಭಾಕರ್, ಶ್ರೀನಿವಾಸ್ ಕಾಮತ್,  ಮಹೇಂದ್ರ, ನಾಸೀರ್,  ಗೌತಮ ಆಚಾರ್ಯ, ಮಾಧವ, ಗಿರಿದರ್ಶಿನಿ ಮೆಡಿಕಲ್ ಅನಿಲ್ ಕುಮಾರ್, ಜಯನಗರ ಗೋಪಿನಾಥ್, ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಚಿದಂಬರ, ಲೇಖನಮೂರ್ತಿ ಸೇರಿದಂತೆ ಹಲವರು ಹಾಜರಿದ್ದು ಶುಭ ಕೋರಿದರು.

PRESIDENT:SOCIETY...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading