
ಹೊಸನಗರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (KUWJ) ಬೆಂಗಳೂರು ವತಿಯಿಂದ 2024-25 ಸಾಲಿನ ಮಂಡಿಬೆಲೆ ಶಾಮಣ್ಣ ಸ್ಮಾರಕ ರಾಜ್ಯ ಪ್ರಶಸ್ತಿಗೆ ಹೊಸನಗರ ತಾಲೂಕಿನ ವಿಜಯವಾಣಿ ವರದಿಗಾರರಾದ ರವಿ ಬಿದನೂರು ಆಯ್ಕೆಯಾಗಿದ್ದಾರೆ.
ಗ್ರಾಮೀಣ ಜನರ ಜೀವನದ ಅತ್ಯುತ್ತಮ ವರದಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ ಸದಾ ಕ್ರಿಯಾಶೀಲ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರವೀಬಿದನೂರು ಅವರಿಗೆ ತುಮಕೂರಿನಲ್ಲಿ ಜನವರಿ 18 ಮತ್ತು 19ರಂದು ನಡೆಯುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ರವಿ ಬಿದನೂರು ಮಾಧ್ಯಮ ಕ್ಷೇತ್ರದ ಸಾಧನೆಗೆ ಈ ಪ್ರಶಸ್ತಿ ಲಭಿಸಸಿರುವುದಕ್ಕೆ ಹೊಸನಗರ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರದಾನ ಕಾರ್ಯದರ್ಶಿ ನಾ ರವಿ ಸೇರಿ ಸಂಘದ ಸದಸ್ಯರು ಅಭಿನಂದಿಸಿದ್ದಾರೆ....
RAVI BIDANOORU
Discover more from Prasarana news
Subscribe to get the latest posts sent to your email.
