HARATHALU HALAPPA: ಆನೆದಾಳಿಗೊಳಗಾದ ರೈತರ ಜಮೀನುಗಳಿಗೆ ಮಾಜಿ ಸಚಿವ “ಹರತಾಳು ಹಾಲಪ್ಪ” ಬೇಟಿ…

ರಿಪ್ಪನ್ ಪೇಟೆ: ತಾಲೂಕಿನ ರಿಪ್ಪನ್ ಪೇಟೆಯ ಕೊರಗಿ ಗ್ರಾಮದ ಆನೆ ದಾಳಿಗೊಳಗಾದ ರೈತರ ಜಮೀನುಗಳಿಗೆ ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ನಿನ್ನೆ ಭೇಟಿ ನೀಡಿ ಹಾನಿಯನ್ನ ಪರಿಶೀಲಿಸಿದರು.
ಬಳಿಕ ರೈತರೊಂದಿಗೆ ಮಾತನಾಡಿದ ಅವರು ಈ ಕುರಿತಾಗಿ ಸಂಬಂಧಪಟ್ಟ ಅರಣ್ಯಾಧಿಕಾರಗಳ ಜೊತೆ ಮಾತನಾಡಿ ಆನೆಗಳ ಸ್ಥಳಾಂತರಕ್ಕೆ ಹಾಗೂ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.
ಅಲ್ಲದೆ ಈ ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ರೈತರು ತಮ್ಮ ಬೆಳೆಗಳನ್ನ ರಕ್ಷಿಸಿಕೊಳ್ಳುವುದು ಕಷ್ಟವಾಗಿದೆ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮವನ್ನು ಕೈಗೊಂಡು ರೈತರು ಬೆಳೆದಂತಹ ಫಸಲುಗಳನ್ನ ಕಾಡು ಪ್ರಾಣಿಗಳ ದಾಳಿಯಿಂದ ರಕ್ಷಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು ಈ ಸಂದರ್ಭದಲ್ಲಿ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷರಾದ ವೀರೇಶ್ ಅಲವಳ್ಳಿ, ಸೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.

HARATHALU HALAPPA.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading