
ಹೊಸನಗರ: ಹೆಚ್ಚುವರಿ ಹುದ್ದೆ ಎಂದು ಶಿಕ್ಷಕರನ್ನು ವರ್ಗಾವಣೆ ಮಾಡಲು ಹೊರಟಿರುವುದನ್ನು ವಿರೋಧಿಸಿ ಇಂದು ಹೊಸನಗರ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವಿದ್ಯಾರ್ಥಿಗಳ ಜೊತೆಗೂಡಿ ಪೋಷಕರು ಪ್ರತಿಭಟನೆಯನ್ನು ನಡೆಸಿದರು.
ಪ್ರತಿಭಟನೆಗೆ ಸಂಬಂಧಿಸಿದಂತೆ, ಶಾಲೆಯಲ್ಲಿ 365 ವಿದ್ಯಾರ್ಥಿಗಳು ಓದುತ್ತಿದ್ದು, ಮೂರು ಮಾಧ್ಯಮಗಳನ್ನು ಹೊಂದಿದ್ದು, 9 ವಿಭಾಗಗಳಿರುತ್ತವೆ. ಈವರೆಗೆ ಶಾಲೆಯಲ್ಲಿ 2 ಕಲಾ(ಕನ್ನಡ) ಮತ್ತು 1 ಕಲಾ(ಉರ್ದು) ಹುದ್ದೆಗಳಿದ್ದು, ಪ್ರಸ್ತುತ ವರ್ಗಾವಣೆ ನಿಯಮದ ಪ್ರಕಾರ, ಒಂದು ಕಲಾ(ಕನ್ನಡ) ಹುದ್ದೆಯನ್ನು ಹೆಚ್ಚುವರಿಯೆಂದು ಗುರುತಿಸಿ, ಕಲಾ(ಕನ್ನಡ) ಹುದ್ದೆಯ ಶಿಕ್ಷಕರನ್ನು ವರ್ಗಾವಣೆ ಮಾಡಲು ಸಿದ್ಧತೆ ಮಾಡಿರುತ್ತಾರೆ. ಕಲಾ(ಉರ್ದು) ಶಿಕ್ಷಕರಿಂದಲೇ ಆಂಗ್ಲ ಮಾಧ್ಯಮದ ಕಲಾ ವಿಷಯ ಬೋಧಿಸುವಂತೆ ತಿಳಿಸಿರುತ್ತಾರೆ. ಇದರಿಂದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದು ಅಸಾಧ್ಯವಾಗಿದ್ದು ಕೂಡಲೇ ವರ್ಗಾವಣೆಯನ್ನು ರದ್ದುಗೊಳಿಸಿ ಶಾಲೆಗೆ ಅಗತ್ಯ ಸೌಲಭ್ಯವನ್ನು ಒದಗಿಸಬೇಕೆಂದು ಪ್ರತಿಭಟನೆನಾ ಹಮ್ಮಿಕೊಂಡು ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್ ಗೆ ಮನವಿಯನ್ನು ನೀಡಿ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುವವರೆಗೆ ಶಾಲಾ ಆವರಣದಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಎಸ್ ಡಿಎಂಸಿ ಅಧ್ಯಕ್ಷರು ಸದಸ್ಯರು ಹಾಗೂ ಅಪೋಷಕರು ಪಾಲ್ಗೊಂಡಿದ್ದರು.
HOSANAGARA NEWS...
Discover more from Prasarana news
Subscribe to get the latest posts sent to your email.
