HOSANAGARA NEWS:    81.14 ಲಕ್ಷ ಅನುದಾನದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಗೋಪಾಲಕೃಷ್ಣ ಬೇಳೂರು..

ಹೊಸನಗರ: ಹೊಸನಗರವನ್ನು ಮಾದರಿ ನಗರವನ್ನಾಗಿಸುವುದು ನನ್ನ ಗುರಿ ಈ ನಿಟ್ಟಿನಲ್ಲಿ ನಿರಂತರವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇನೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಂದು ಹೊಸನಗರ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಇಂದಿರಾ ಕ್ಯಾಂಟೀನ್ ಕಟ್ಟಡ ಉದ್ಘಾಟನೆ ಹಾಗೂ ಸುಮಾರು 81.14 ಲಕ್ಷ ಅನುದಾನದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಇಂದಿರಾ ಕ್ಯಾಂಟೀನ್ ಇಂದು ಹೊಸನಗರ ದಲ್ಲಿ ಉದ್ಘಾಟನೆಗೊಂಡಿದ್ದು ಅದರ ಸದುಪಯೋಗವನ್ನ ಎಲ್ಲರೂ ಪಡೆದುಕೊಳ್ಳಬಹುದು. ಅಸಂಘಟಿತ ಕಾರ್ಮಿಕರು ಬಡ ಜನರಿಗೆ ಇಂದಿರಾ ಕ್ಯಾಂಟೀನ್ ಬಹಳಷ್ಟು ಉಪಕಾರಿಯಾಗಲಿ ಕಡಿಮೆ ದರದಲ್ಲಿ ಉಪಹಾರ ಮತ್ತು ಊಟದ ಸೌಲಭ್ಯ ಇಲ್ಲಿ ನೀಡಲಾಗುತ್ತದೆ. ಬೇರೆ ಊರುಗಳಿಂದ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳು ಆಸ್ಪತ್ರೆಗೆ ಬರುವ ಜನರು ಈ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಎಂದರು. ಹಾಗೆಯೇ ಸಿಬ್ಬಂದಿಗಳಿಗೆ ಗುಣಮಟ್ಟದ ಆಹಾರವನ್ನು ವಿತರಿಸುವಂತೆ ಸೂಚಿಸಿದರು.
ಹಾಗೆಯೇ 81.14 ಲಕ್ಷ ರೂಗಳ ಅನುದಾನದಲ್ಲಿ ಹೊಸನಗರ ಪಟ್ಟಣ ದ ಬಸ್ ನಿಲ್ದಾಣ ಮುಂಭಾಗ ವಾಣಿಜ್ಯ ಮಳಿಗೆ ನಿರ್ಮಾಣ, ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ವಾರ್ಡ್ಗಳಲ್ಲಿ ಹೈ ಮಾಸ್ಕ್ ಲೈಟ್ ಅಳವಡಿಕೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವೇದಿಕೆ ಮುಂಭಾಗದ ಮೇಲ್ಚಾವಣಿ ನಿರ್ಮಾಣ ಹಾಗೂ ಶೌಚಾಲಯ ನಿರ್ಮಾಣ ಕಾಮಗಾರಿ, ಸರ್ಕಾರಿ ಗಂಡು ಮಕ್ಕಳ ಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿಗಳ ಉನ್ನತೀಕರಣ, ಹಾಗೂ ಸರ್ಕಾರಿ ಉರ್ದು ಶಾಲೆಗೆ ರಂಗಮಂದಿರ ನಿರ್ಮಾಣ ಕಾಮಗಾರಿಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯತ್ ಅಧ್ಯಕ್ಷ ನಾಗಪ್ಪ ಉಪಾಧ್ಯಕ್ಷ ಚಂದ್ರಕಲಾ ಸದಸ್ಯರಾದ ಸಿಂತಿಯ ಸೇರವೋ, ಶಾಹಿನಾ ನಾಸಿರ್, ಗುರುರಾಜ್, ನಿತ್ಯಾನಂದ, ಗುರುರಾಜ್ ಕೆ ಎಸ್, ತಹಶೀಲ್ದಾರ್ ರಶ್ಮಿ ಹೆಚ್ ಜೇ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಹರೀಶ್ ಎಂ ಏನ್, ಚಂದ್ರ ಮೌಳಿ ಬಿಜಿ, ಚಿದಂಬರ್ ಹೂವಿನ ಕೋಣೆ, ಸುಮಾ ಸುಬ್ರಮಣ್ಯ ಮುಂತಾದವರು ಉಪಸ್ಥಿತರಿದ್ದರು.

HOSANAGARA NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading