
ಹೊಸನಗರ: ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಕೈಗೊಂಡಂತಹ ನಿರ್ಧಾರ ಸ್ವಾಗತಅರ್ಹ ಆದರೆ ಹೊಸನಗರ ತಾಲೂಕಿನ ಪ್ರಮುಖ ಜಲಪಾತಗಳು ತೀರ್ಥಹಳ್ಳಿ ತಾಲೂಕಿಗೆ ಸೇರಿದ್ದು ಎಂದು ಸರ್ಕಾರ ಪ್ರಕಟಿಸಿರುವ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ ಅಧಿಕಾರಿಗಳಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ಹೋಗಿದ್ದು ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಜಿಲ್ಲಾ ಬಿಜೆಪಿ ಯುವಮೋರ್ಚ ಕಾರ್ಯದರ್ಶಿ ನಗರ ನಿತಿನ್ ಆಗ್ರಹಿಸಿದ್ದಾರೆ.
ಪ್ರವಾಸಿ ತಾಣಗಳ ಅಭಿವೃದ್ಧಿಗೆ ಸರ್ಕಾರ ಉತ್ತೇಜನವನ್ನು ನೀಡುತ್ತಿದೆ ಆದರೆ ರಾಜ್ಯದಲ್ಲೆ ಅತೀ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಹೊಸನಗರ ತಾಲ್ಲೂಕಿನಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ಸಂಕಷ್ಟು ಅವಕಾಶವಿದ್ದು ಸರ್ಕಾರ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಿದೆ. ಈ ನಡುವೆ ಇತ್ತಿಚೆಗೆ ಇಲಾಖೆ ಪ್ರವಾಸಿ ತಾಣಗಳ ಪಟ್ಟಿ ಬಿಡುಗಡೆ ಮಾಡಿದ್ದು ಅದರಲ್ಲಿ ಹೊಸನಗರ ತಾಲ್ಲೂಕಿನ ಪ್ರವಾಸಿ ತಾಣಗಳಾದ ಹಿಡ್ಲುಮನೆ ಜಲಪಾತ, ಕುಂಚಿಕಲ್ ಜಲಪಾತ, ತಲಾಸಿ ಅಬ್ಬಿ ಜಲಪಾತ ಹಾಗೂ ಇತರೆ ಪ್ರವಾಸಿ ತಾಣಗಳನ್ನು ಬೇರೆ ಬೇರೆ ತಾಲ್ಲೂಕಿನ ಪಟ್ಟಿಯಲ್ಲಿ ದಾಖಲಿಸಿರುವುದು ಖಂಡನೀಯ. ಹಾಗೂ ಈ ಪಟ್ಟಿಯಲ್ಲಿ ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣಗಳಾದ ನಿತ್ಯ ಸಾವಿರಾರು ಜನ ಪ್ರವಾಸಿಗರು ಬೇಟಿ ನೀಡುವ ದೇವಗಂಗೆ ಸಪ್ತಕೊಳಗಳು, ಚಕ್ರಾ ಡ್ಯಾಂ ಮತ್ತು ಜಲಪಾತ, ಬಾಳೆಬರೆ ಹಾಗೂ ಇತರ ಸ್ಥಳಗಳನ್ನು ಬಿಟ್ಟಿರುವುದು ಸರಿಯಲ್ಲ. ಪ್ರವಾಸೋದ್ಯಮ ಇಲಾಖೆಗೆ ಪ್ರದೇಶವಾರು ಪ್ರವಾಸಿ ತಾಣಗಳ ಮಾಹಿತಿಯೇ ಇಲ್ಲದಿರುವುದು ಪ್ರವಾಸಿ ತಾಣಗಳ ಬಗ್ಗೆ ಎಷ್ಟು ನಿರ್ಲಕ್ಷ್ಯ ವಹಿಸಿದೆ ಅನ್ನುವುದು ಸ್ಪಷ್ಟವಾಗುತ್ತೆ. ಕೂಡಲೇ ಅವುಗಳನ್ನ ಸರಿಪಡಿಸಬೇಕು ಎಂದು ಅವರು ಆಗ್ರಿಸಿದರು.
NAGARA NEWS..
Discover more from Prasarana news
Subscribe to get the latest posts sent to your email.
