
ಹೊಸನಗರ: ಹೊಸನಗರ ವರ್ತಕರ ಸಂಘದ ನೂತನ ಅಧ್ಯಕ್ಷರಾಗಿ ಪೂರ್ಣೇಶ್ ಮಲೆಬೈಲ್ ಆಯ್ಕೆಯಾಗಿದ್ದಾರೆ.
ಬುದುವಾರ ಪಟ್ಟಣದ ಗಾಯತ್ರಿ ಮಂದಿರದಲ್ಲಿ ವರ್ತಕರ ಸಂಘದ ನೂತನ ಅಧ್ಯಕ್ಷರ ಆಯ್ಕೆ ಸಭೆಯು ನಡೆದಿದ್ದು, ನೂತನ ಅಧ್ಯಕ್ಷರಾಗಿ ಉದ್ಯಮಿ ಪ್ರಿಯಾಂಕ ಫ್ಯಾಶನ್ ಮಾಲೀಕರಾದ ಪೂರ್ಣೇಶ್ ಮಲೆಬೈಲ್ ಆಯ್ಕೆಯಾದರು.
ಸಭೆಯಲ್ಲಿ ಮಾತನಾಡಿದ ನೂತನ ಅಧ್ಯಕ್ಷರು ಸಂಘದ ಎಲ್ಲಾ ಸದಸ್ಯರು ವರ್ತಕರು ಸಂಘದೊಂದಿಗೆ ಕೈಜೋಡಿಸುವ ಮೂಲಕ ಸಂಘದ ಸಂಘವನ್ನು ಇನ್ನಷ್ಟು ಬಲಪಡಿಸಬೇಕು ಜೊತೆಗೆ ವರ್ತಕರ ಸಮಸ್ಯೆಗಳಿಗೆ ನಾವೆಲ್ಲರೂ ಒಟ್ಟಾಗಿ ಸ್ಪಂದಿಸುವ ಕೆಲಸಕ್ಕೆ ಮುಂದಾಗಬೇಕು ಹಾಗೆಯೇ ಸಂಘದ ಸಭೆಗಳಿಗೆ ಸರ್ವ ಸದಸ್ಯರುಗಳು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು ಈ ಆಯ್ಕೆ ಪ್ರಕ್ರಿಯೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ವಿಜಯೇಂದ್ರ ಸೆಟ್, ಸಂಘದ ಸದಸ್ಯರಾದ ಬಿ ಎಸ್ ಸುರೇಶ್, ವಾದಿರಾಜ್, ಹೆದ್ಲಿ ವಿನಾಯಕ್, ವಿಠಲ್ ರಾವ್, ಮುಂತಾದವರು ಪಾಲ್ಗೊಂಡಿದ್ದರು.
TRADER'S ASSOCIATION..
Discover more from Prasarana news
Subscribe to get the latest posts sent to your email.
