ಆನಂದಪುರ: ಗೌತಮಪುರದ ತ್ಯಾಗರ್ತಿ ತಿರುವಿನಲ್ಲಿ ಶುಕ್ರವಾರ ಟಿವಿಎಸ್ ಎಕ್ಸೆಲ್ ಮತ್ತು ಅಶೋಕ್ ಲೇಲ್ಯಾಂಡ್ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಳಂದೂರು ಗ್ರಾಮದ ವಾಸಪ್ಪ(70) ಹಾಗೂಇವರ ಅಳಿಯ ಹೊಸನಗರ ತಾಲೂಕಿನವಾರಂಬಳ್ಳಿ ಗ್ರಾಮದ ಸತೀಶ್(40)ಸಾವಿಗೀಡಾದವರು.
ಬೆಳಂದೂರು ಗ್ರಾಮದಿಂದ ಆನಂದಪುರದ ಕಡೆ ತೆರಳುತ್ತಿದ್ದ ಟಿವಿಎಸ್ ಎಕ್ಸೆಲ್ ಹಾಗೂ ಆನಂದಪುರದಿಂದ ತ್ಯಾಗರ್ತಿ ಕಡೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಿಕ್ಕಿಯಾದ ರಭಸಕ್ಕೆ ಟಿವಿಎಸ್ ಎಕ್ಸೆಲ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಹೊಸನಗರ:ಕಲೆಯೊಂದಿಗೆ ಸಾಮಾಜಿಕ ಕಳಕಳಿಯ ಹೊಂದಿದ್ದ ಕಲಾವಿದ. ಭಟ್ಟೆಮಲ್ಲಪ್ಪದ ಸಾರಾ ಸಂಸ್ಥೆಯ ಮೂಲಕ ಜಲಸಾಕ್ಷರತೆ, ಇಂಗುಗುಂಡಿ ನಿರ್ಮಾಣ, ಹಸರೀಕರಣ, ಕೆರೆಗಳ ಪುನಶ್ಚೇತನದಂತಹ ಪರಿಸರ ರಕ್ಷಣೆ ಸಂಬಂಧಿ ತಮ್ಮನ್ನು ತೊಡಗಿಸಿಕೊಂಡವರು.…
ಹೊಸನಗರ; ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಘಟಕದ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ರವಿ ನಾಗರಕೊಡಿಗೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ…
ಹೊಸನಗರ: ದೆಹಲಿ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದು ಹಿನ್ನೆಲೆ ಹೊಸನಗರ ಬಿಜೆಪಿ ಮಂಡಲ ವತಿಯಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಗೆಲುವನ್ನು…