
ಹೊಸನಗರ: ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ಉದ್ದೇಶದಿಂದ ಮಕ್ಕಳಿಗೆ ಈ ದಿನ ಉಚಿತ ಬ್ಯಾಗ್ ಹಾಗೂ ನೋಟ್ ಬುಕ್ ಗಳನ್ನು ವಿತರಿಸಲಾಗಿದೆ ಎಂದು ಅನ್ನಪೂರ್ಣೇಶ್ವರಿ ಟ್ರಾವೆಲ್ಸ್ ಮಾಲೀಕ ಸುಧೀರ್ ತಿಳಿಸಿದರು.
ಪಟ್ಟಣದ ಎಚ್ ಪಿ ಬಿ ಎಸ್ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ನೋಟ್ ಬುಕ್ ವಿತರಿಸಿ ಮಾತನಾಡಿದ ಅವರು ಉದ್ಯಮಿಗಳಾದ ದಿನೇಶ್ ಕುಂಟಿಗೆ ಹಾಗೂ ಚಂದ್ರಣ್ಣ ಮತ್ತು ಸ್ನೇಹಿತರಾದ ಸಂತೋಷ್ ಮುರುಳಿ ಮನೋಹರ್ ಇವರ ಸಹಕಾರದಿಂದ ಈ ದಿನ ನಾನು ಓದಿದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ಹಾಗೂ ಬ್ಯಾಗ್ ಗಳನ್ನು ವಿತರಿಸಿದ್ದೇವೆ ಇಲ್ಲಿಯೇ ಆರಂಭಿಕ ಶಿಕ್ಷಣವನ್ನು ಪಡೆದ ನಾವು ಇದೀಗ ಸಮಾಜದಲ್ಲಿ ಉತ್ತಮವಾದ ಸ್ಥಾನಮಾನವನ್ನ ಪಡೆದಿದ್ದೇವೆ ಇದೀಗ ನಾವು ಓದಿದ ಈ ಸರ್ಕಾರಿ ಶಾಲೆಗೆ ನಮ್ಮ ಕೈಲಾದ ಏನಾದರೂ ಸಹಾಯವನ್ನು ಮಾಡಬೇಕೆಂಬ ಉದ್ದೇಶದಿಂದ ನಾವೆಲ್ಲರೂ ಜೊತೆಗೂಡಿ ಈ ಕೆಲಸವನ್ನ ಮಾಡಿದ್ದು ಈ ಸರ್ಕಾರಿ ಶಾಲೆಗೆ ಇನ್ನಷ್ಟು ದಾನಿಗಳು ಹಳೆಯ ವಿದ್ಯಾರ್ಥಿಗಳು ಸಹಕಾರವನ್ನು ನೀಡಲಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದರು.
ಬಳಿಕ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಲಿಲ್ಲಿ ಡಿಸೋಜಾ ಸಮಾಜದಲ್ಲಿ ಬಹಳಷ್ಟು ಮಂದಿ ಆರ್ಥಿಕವಾಗಿ ಬಲಿಷ್ಠ ರಾಗಿದ್ದಾರೆ ಆದರೆ ಅವರೆಲ್ಲರಿಗೂ ದಾನವನ್ನು ಮಾಡುವ ಮನಸ್ಸು ಇರುವುದಿಲ್ಲ ಕೆಲವರಿಗೆ ಮಾತ್ರ ಇಂತಹ ಗುಣಗಳಿರುತ್ತವೆ ಈ ನಿಟ್ಟಿನಲ್ಲಿ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿ ಸುಧೀರ್ ಹಾಗೂ ಅವರ ಸ್ನೇಹಿತರುಗಳು ಈ ದಿನ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸಹಕಾರವನ್ನು ನೀಡಿದ್ದು ನಮ್ಮ ಶಾಲೆಯ ಹಾಗೂ ಪೋಷಕರ ಪರವಾಗಿ ಅವರಿಗೆ ಅಭಿನಂದನೆಯನ್ನು ತಿಳಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಶಾಲೆ ಎಸ್ ಡಿಎಂಸಿ ಅಧ್ಯಕ್ಷರು ಸದಸ್ಯರು, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
CONTRIBUTION.
Discover more from Prasarana news
Subscribe to get the latest posts sent to your email.
