
ಹೊಸನಗರ:ಅಪಘಾತವೊಂದರಲ್ಲಿ ಮೃತಪಟ್ಟಿದ್ದ ಹೊಸನಗರ ತಾಲುಕು ಮುತ್ತೂರು ಗ್ರಾಮದ ಯುವಕನೊಬ್ಬನ ಕುಟುಂಬಕ್ಕೆ
ಹೊಸನಗರದ ಭಾರತೀಯ ಸ್ಟೇಟ್ ಬ್ಯಾಂಕ್ ಮೃತಪಟ್ಟ ತನ್ನ ಆ ಗ್ರಾಹಕನ ಕುಟುಂಬಕ್ಕೆ
ಪ್ರಧಾನಮಂತ್ರಿ ಸುರಕ್ಷಾ ವಿಮೆ ಮತ್ತು
ಪ್ರಧಾನಮಂತ್ರಿ ಜೀವನಜ್ಯೋತಿ ವಿಮೆಗಳ ಪರಿಹಾರ ಮೊತ್ತವನ್ನು ತ್ವರಿತವಾಗಿ ಒದಗಿಸಿದೆ.
ದಿನಾಂಕ 02.07.2026 ರಂದು ಹೊಸನಗರ ಸಮೀಪದ ಕೊಪ್ಪರಗುಂಡಿ-ಮುತ್ತೂರು ರಸ್ತೆಯ ಬೈಕ್ ಅಪಘಾತವೊಂದರಲ್ಲಿ ಮುತ್ತೂರಿನ ಯುವಕ ವೆಂಕಟರಮಣ ಆಚಾರ್ಯ ಅನ್ನುವ ಯುವಕ ಮೃತಪಟ್ಟಿದ್ದ.ಅಪಘಾತ ಮೊದಲು ಯುವಕನ ಖಾತೆಯಿಂದ ಪ್ರಧಾನಮಂತ್ರಿಗಳ ಸಾಮಾಜಿಕ ಸುರಕ್ಷಾ ವಿಮೆಯ ಪ್ರೀಮಿಯಂ ಪಾವತಿಯಾಗಿತ್ತು.
ಈ ಸಂಧರ್ಭದಲ್ಲಿ ಮಾತಾಡಿದ ಶಾಖಾ ವ್ಯವಸ್ಥಾಪಕ ಶ್ರೀ ಮಾಧವ್, ಅರ್ಹತೆ ಇರುವ ಗ್ರಾಹಕರೆಲ್ಲರೂ ಸಾಮಾಜಿಕ ಭದ್ರತೆಯ ವಿಮೆಯನ್ನು ಮಾಡಿಸಿಕೊಳ್ಳಲು ತಿಳಿಸಿದರು. ಮತ್ತು ಉಳಿತಾಯ ಖಾತೆಗೆ ಇರುವ ಬ್ಯಾಂಕ್ ನ ವಿಶೇಷ ಗ್ರೂಪ್ ಇನ್ಷುರೆನ್ಸ್ ಮಾಡಿಸಿಕೊಳ್ಳಲು ಸಹ ತಿಳಿಸಿದರು. ಅದರಂತೆ ಗ್ರೂಪ್ ಇನ್ಷುರೆನ್ಸ್ ವ್ಯಕ್ತಿಯೊಬ್ಬನಿಗೆ ಕನಿಷ್ಠ ಎರಡು ಲಕ್ಷದಿಂದ ಗರಿಷ್ಟ ಅರವತ್ತು ಲಕ್ಷದವರೆಗೆ ಭದ್ರತೆ ಒದಗಿಸುತ್ತದೆ.ಅದಕ್ಕೆ ತಗಲುವ ವಾರ್ಷಿಕ ವೆಚ್ಚ ಕನಿಷ್ಠ ಇನ್ನೋರರಿಂದ ಗರಿಷ್ಟ ಮೂರು ಸಾವಿರ ಮಾತ್ರ.
ಈ ಸಮಯದಲ್ಲಿ ಮೃತ ಯುವಕನ ಕುಟುಂಬಸ್ತರು, ಬ್ಯಾಂಕ್ ಅಧಿಕಾರಿ ಶ್ರೀ ಸರ್ವೇಶ್, ಗಣೇಶ್ ಮಧುಕರ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದರು.
SBI HOSANAGARA..
Discover more from Prasarana news
Subscribe to get the latest posts sent to your email.
