CHECK UP CAMP:            ರಿಪ್ಪನ್ ಪೇಟೆಯಲ್ಲಿ ಫೆ. 7ರಂದು ಮೊಣಕಾಲು -ಸೊಂಟ ನೋವಿಗೆ ರೋಬೋಟ್ ತಂತ್ರಜ್ಞಾನದ ಬದಲಿ ಶಸ್ತ್ರ ಚಿಕಿತ್ಸಾ ತಪಾಸಣ ಶಿಬಿರ..


ಬಟ್ಟೆಮಲ್ಲಪ್ಪ : ರಿಪ್ಪನ್ ಪೇಟೆ ಜಿ. ಎಸ್. ಬಿ. ಹಾಲ್ ನಲ್ಲಿ ಇದೇ ಫೆ. 7ರಂದು ರೋಬೋಟ್ ತಂತ್ರಜ್ಞಾನದಿಂದ ಮೊಣಕಾಲು, ಸೊಂಟ ನೋವಿಗೆ ಬದಲಿ ಶಸ್ತ್ರ ಚಿಕಿತ್ಸೆ ಮತ್ತು ಸ್ಪೋರ್ಟ್ಸ್ ಇಂಜುರಿ ಕುರಿತಾದ ಬೃಹತ್ ತಪಾಸಣ ಶಿಬಿರವನ್ನು ಪ್ರತಿಷ್ಠಿತ ಮಂಗಳೂರು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ನುರಿತ ವೈದ್ಯರಿಂದ ಹಮ್ಮಿಕೊಳ್ಳಲಾಗಿದೆ.

ರೋಟರಿ ಕ್ಲಬ್ ರಿಪ್ಪನ್ ಪೇಟೆ ಹಾಗೂ ಶ್ರೀ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್,  ಶ್ರೀ ವ್ಯಾಸ ಮಹರ್ಷಿ ಗುರುಕುಲ ಬಟ್ಟೆಮಲ್ಲಪ್ಪ ಹಾಗೂ ಜಿ. ಎಸ್. ಬಿ ಸಮಾಜ ರಿಪ್ಪನ್ ಪೇಟೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಫೆ. 7ರ ಶನಿವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದೆ ಎಂದು ಶ್ರೀ ವ್ಯಾಸ ಮಹರ್ಷಿ ಗುರುಕುಲದ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಹಾಗೂ ರೋಟರಿ ಸಂಸ್ಥೆ ಅಧ್ಯಕ್ಷ ಕೃಷ್ಣರಾಜು ಅವರು ಜಂಟಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಶಿಬಿರದಲ್ಲಿ ಮೊಣಕಾಲಿನ ಕೀಲುಗಳಲ್ಲಿ ತೀವ್ರವಾದ ನೋವು, ಊತ, ಬಿಗಿತ, ಮತ್ತು ಸೊಂಟ - ತೊಡೆ ಸಂಧಿನ ನೋವಿನಿಂದ ಬಳಲುತ್ತಿರುವವರು, ನಡೆಯಲು, ಮಲಗಲು ಅಸಾಧ್ಯ ನೋವು ಅನುಭವಿಸುತ್ತಿರುವವರು, ಜೊತೆಗೆ ಎಸಿಲ್ ಲಿಗಮೆಂಟ್ ಮತ್ತು ಮೆನಿಸ್ಕಲ್ ಗಾಯಗಳಿಂದ ಬಳಲುತ್ತಿರುವವರು ಈ ಶಿಬಿರದ ಸದುಪಯೋಗ ಪಡೆಯಬಹುದಾಗಿದೆ. ಜೊತೆಗೆ ಮೊಣಕಾಲು ಮತ್ತು ಸೊಂಟದ ಯಾವುದೇ ಸಮಸ್ಯೆ ಇರುವವರು ಈ ಶಿಬಿರದ ಸದುಪಯೋಗ ಪಡೆಯಬಹುದು.

ಶಿಬಿರ ಸಂಪೂರ್ಣ ಉಚಿತವಾಗಿದ್ದು ಇಲ್ಲಿ ಆಯ್ಕೆ ಆದವರಿಗೆ ಮಂಗಳೂರು ಯೆನೆಪೋಯ ವೈದ್ಯಕೀಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಶಸ್ತ್ರ ಚಿಕಿತ್ಸೆಗೆ ಆಯ್ಕೆ ಆದವರಿಗೆ ಅಯುಷ್ಮಾನ್ ಭಾರತ್ ಅರೋಗ್ಯ ಕಾರ್ಡ್, ಇಎಸ್ ಐ, ಬಿಪಿಲ್ ಕಾರ್ಡ್, ಯಶಸ್ವಿನಿ ಸೇರಿದಂತೆ ಯಾವುದೇ ಅರೋಗ್ಯ ಕಾರ್ಡ್ ಮತ್ತು ಅರೋಗ್ಯ ವಿಮಾ ಪಾಲಿಸಿಗಳನ್ನು ಹೊಂದಿದಲ್ಲಿ ಶಸ್ತ್ರ ಚಿಕಿತ್ಸೆ ಸಂಪೂರ್ಣ ಉಚಿತವಾಗಿರಲಿದೆ. ಹೀಗಾಗಿ ಶಿಬಿರಕ್ಕೆ ಬರುವಾಗ ಈ ಮೇಲಿನ ಎಲ್ಲಾ ದಾಖಲೆಗಳನ್ನು ಕಡ್ಡಾಯವಾಗಿ ತಮ್ಮ ಆಧಾರ ಕಾರ್ಡ್ ಜೊತೆಗೆ ತರುವುದು.

ಯೆನೆಪೋಯ ಆಸ್ಪತ್ರೆಯ ನುರಿತ ವೈದ್ಯರಾದ ಡಾ. ಶರತ್ ಬಾಳೆಮನೆ, ಸಹ ಪ್ರಾದ್ಯಾಪಕರು ಮತ್ತು ಆರ್ಥ್ತೋ ಪ್ಲಾಸ್ಟಿ ಸರ್ಜನ್ ಇವರ ನೇತೃತ್ವದ ವೈದ್ಯರ ತಂಡ ಶಿಬಿರ ನಡೆಸಿಕೊಡಲಿದೆ.

ಇದೇ ಸಂದರ್ಭದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ವತಿಯಿಂದ ರಕ್ತ ದಾನ ಶಿಬಿರ ನಡೆಯಲಿದ್ದು ರಕ್ತದಾನಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

ಬಟ್ಟೆಮಲ್ಲಪ್ಪದಿಂದ ಉಚಿತ ವಾಹನ ವ್ಯವಸ್ಥೆ : ಶಿಬಿರದ ದಿನ ಬಟ್ಟೆಮಲ್ಲಪ್ಪ ಸರ್ಕಲ್ ನಿಂದ ಶ್ರೀ ವ್ಯಾಸ ಮಹರ್ಷಿ ಗುರುಕುಲವು ಶಿಬಿರಕ್ಕೆ ತೆರಳುವವರಿಗೆ ಉಚಿತ ವಾಹನ ವ್ಯವಸ್ಥೆ ಕಲ್ಪಿಸಿದೆ. ಅಂದು ಬೆಳಿಗ್ಗೆ 9.45ಕ್ಕೆ ಸರಿಯಾಗಿ ವಾಹನವು ಶ್ರೀ ವ್ಯಾಸ ಮಹರ್ಷಿ ಗುರುಕುಲದಿಂದ ಹೊರಡಲಿದೆ. ಅವಶ್ಯಕತೆ ಇರುವವರು ಉಚಿತ ವಾಹನ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಅಧ್ಯಕ ಮಂಜುನಾಥ್ ಬ್ಯಾಣದ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8152941498 / 94487 21650 ಗೆ ಸಂಪರ್ಕಿಸಬಹುದಾಗಿದೆ.

CHECK UP CAMP..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe