S M KRISHNA:ಎಸ್ ಎಂ ಕೃಷ್ಣ ಅವರು ಕ್ರಾಂತಿಕಾರಿ ಯೋಜನೆಗಳ ನೇತಾರ: ಚಂದ್ರಮೌಳಿ ಬಿಜಿ..

ಹೊಸನಗರ: ಮಾಜಿ ರಾಜ್ಯಪಾಲ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಕ್ರಾಂತಿಕಾರಿ ಯೋಜನೆಗಳ ಸರದಾರ ರಾಜ್ಯಕ್ಕೆ ಅಭಿವೃದ್ಧಿ ಪತ ಹೇಗಿರಬೇಕು ಎಂಬುದನ್ನು ಪರಿಚಯಿಸಿಕೊಟ್ಟ ಮಹಾನ್  ನಾಯಕ ಅವರ ಅಗಲಿಕೆ ಅತೀವ ದುಃಖ ತಂದಿದೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರ ಮೌಳಿ ಹೇಳಿದರು.
ಹೊಸನಗರ ಗಾಂಧಿಮಂದಿರದಲ್ಲಿ ನಿನ್ನೆ ಎಸ್ಎಂ ಕೃಷ್ಣ ಅವರಿಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ಅಭಿವೃದ್ಧಿಯಲ್ಲಿ ತಮ್ಮದೇ ಆದಂತಹ ವಿಶೇಷ ಕೊಡುಗೆಯನ್ನು ನೀಡುವ ಮೂಲಕ ಅಕ್ಷರ ದಾಸೋಹ, ಸ್ತ್ರೀಶಕ್ತಿ ಸಬಲೀಕರಣ ಹೀಗೆ ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಹಿಂದುಳಿದ ವರ್ಗದವರ ಧ್ವನಿಯಾಗಿ ರಾಜಕೀಯ ಜೀವನದಲ್ಲಿ ಯಶಸ್ವಿಯನ್ನು ಕಂಡಂತಹ ಮಹಾನ್ ನಾಯಕ ಅವರ ಅಗಲಿಕೆ ತುಂಬಲಾರದ ನಷ್ಟ ಎಂದರು. ಈ ಸಂದರ್ಭದಲ್ಲಿ  ಪ್ರಭಾಕರ್, ಪಟ್ಟಣ ಪಂಚಾಯತ್ ಅದ್ಯಕ್ಷ ನಾಗಪ್ಪ, ಸದಸ್ಯರಾದ ಗುರುರಾಜ್, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ನೇತ್ರಾವತಿ, ಪ್ರವೀಣ್ , ಕಾರ್ಯದರ್ಶಿ ಸದಾಶಿವ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯ ಅಶ್ವಿನ್ ಕುಮಾರ್, ಗ್ರಾಮ ಪಂಚಾ ಯಿತಿ ಸದಸ್ಯ ಮಹೇಂದ್ರಕುಮಾರ್ , ಎಂಪಿ ಸುರೇಶ್ , ಗುರು ಜಯನಗರ , ಉಪಸ್ಥಿತರಿದ್ದರು...

S M KRISHNA


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading