TRIBUTE:ಕಾಂಗ್ರೇಸ್ ಮುಖಂಡ ಆನೆಗದ್ದೆ ಜಯಪ್ಪ ನಿಧನ: ಶ್ರದ್ಧಾಂಜಲಿ ಸಭೆ.

ಹೊಸನಗರ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಆನೆ ಗದ್ದೆ ಜಯಪ್ಪನವರು ನಿಧನರಾಗಿದ್ದು ಈ ಹಿನ್ನೆಲೆ ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಗಾಂಧಿ ಮಂದಿರದಲ್ಲಿ ಶ್ರದ್ಧಾಂಜಲಿ ಸಭೆ ನೆರವೇರಿತು.
ಈ ವೇಳೆ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿಜಿ ಚಂದ್ರಮೌಳಿ ಆನೆ ಗದ್ದೆ ಜಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿ ಕಾಂಗ್ರೆಸ್ ಮುಖಂಡ ಆನೆಗದ್ದೆ ಜಯಪ್ಪನವರು ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿದ್ದಾರೆ ಅವರ ಅಗಲಿಕೆ ನೋವನ್ನ ಉಂಟುಮಾಡಿದೆ ಎಂದರು ಜಯಪ್ಪ ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡರಾದ ಬಿ ಆರ್ ಪ್ರಭಾಕರ್, ಪ್ರಧಾನ ಕಾರ್ಯದರ್ಶಿಗಳಾದ ಸದಾಶಿವ ಶೆಟ್ಟಿ ,ಎಂಪಿ ಸುರೇಶ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರಾದ ಬಿಜಿ ನಾಗರಾಜ್, ಪಕ್ಷದ ಮುಖಂಡರಾಗಿರುವ ಅಶ್ವಿನಿ ಕುಮಾರ್, ಎಂ ಪಿ ಲೋಕೇಶ್, ನೇತ್ರಾವತಿ, ಚನ್ನಬಸವ, ಚಂದ್ರಮೂರ್ತಿ, ಎಂಪಿ ಲೋಹಿತ್, ನೂರ ಮೇಟೆಲ್ಡ್  , ಉಬೇದ್, ಗುರು ಜಯನಗರ ಇನ್ನು ಮುಂತಾದವರು ಉಪಸ್ಥಿತರಿದ್ದರು.

TRIBUTE..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading