
ಹೊಸನಗರ: ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಕೃಷಿಕರೊಬ್ಬರ ಮೇಲೆ ಕಲ್ಲು ಜಾರಿ ಬಿದ್ದು ಸಾವನ್ನಪ್ಪಿದ ದಾವಣಗೆರೆ ತಾಲೂಕಿನ ಬ್ರಹ್ಮೇಶ್ವರ ಸಮೀಪದ ಬುಧವಾರ ಬೆಳಿಗ್ಗೆ 11.30 ಕೆ ಸಂಭವಿಸಿದೆ.
ಸತೀಶ್ 35 ವರ್ಷ ಬ್ರಹ್ಮೇಶ್ವರ ವಾಸಿ ಇವರು ಮಸಗಲಿ ಗ್ರಾಮದಲ್ಲಿರುವ ಸರ್ವೆ ನಂಬರ್ 16ರ ತಮ್ಮ ಜಮೀನಿನ ಪಕ್ಕದಲ್ಲಿ ತಮ್ಮ ತೋಟಕ್ಕೆ ನೀರಿನ ವ್ಯವಸ್ಥೆಯನ್ನು ಮಾಡಲು ಧರೆಯ ಕೆಳಭಾಗ ಗುಂಡಿಯನ್ನು ತೆಗೆಯುವ ವೇಳೆ ದರೆಯಿದ್ದ ದೊಡ್ಡಗಾತ್ರದ ಕಲ್ಲು ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ದೇಹವನ್ನು ನಿನ್ನೆ ಹೊಸನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಘಟನೆ ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ.
DEATH NEWS.
Discover more from Prasarana news
Subscribe to get the latest posts sent to your email.
