ANGANWADI:ಐಸಿಡಿಎಸ್ ಕಾರ್ಯಕ್ರಮದಿಂದ ಶಿಶು ಹಾಗೂ ತಾಯಿಮರಣ ಗಣನೀಯವಾಗಿ ಕಡಿಮೆಯಾಗಿದೆ: ಆರಗ ಜ್ಞಾನೇಂದ್ರ.

ಹೊಸನಗರ:ಐಸಿಡಿಎಸ್ ಕಾರ್ಯಕರ್ತರ ಪ್ರಾಮಾಣಿಕ ಸೇವೆ ಇಂದ  ಶಿಶು ಹಾಗೂ ತಾಯಿಯ ಮರಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು. ಪಟ್ಟಣದ ಈಡಿಗರ ಸಭಾಭವನದಲ್ಲಿ ಆಯೋಜಿಸಲಾಗಿದ್ದ
ಐ ಸಿ ಡಿ ಎಸ್ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪ್ರಾಮಾಣಿಕ ಸೇವೆಸಲ್ಲಿಸುತ್ತಿದ್ದು, ಮಕ್ಕಳ ಆರೈಕೆಯಲ್ಲಿ ನಿರತವಾಗಿರುವ ಅವರು ಅ ಮಕ್ಕಳ ಎರಡನೇ ತಾಯಿಯಂತೆ ಎಂದರು ಅಲ್ಲದೆ ಇವರಿಗೆ ನೀಡುವಂತಹ ಗೌರವಧನ ಅವರ ಗಣನೀಯ ಸೇವೆಗೆ ಸಲ್ಲುವಂತಹ ಗೌರವವಲ್ಲ ಎಂದು ಅವರು ತಿಳಿಸಿದರು ಅಲ್ಲದೆ ಕೋವಿಡ್ ನಂತಹ ಸಂದರ್ಭದಲ್ಲಿ ಅವರು ಸಲ್ಲಿಸಿದಂತಹ ಸೇವೆಯನ್ನು ಸ್ಮರಿಸಿದರು ಜೊತೆಗೆ ಸರ್ಕಾರ ಇವರಿಗೆ ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು ನೀಡುವ ಜೊತೆಗೆ ಗೌರವ ದನ ಹೆಚ್ಚಿಸುವುದು ಅಲ್ಲದೆ ಆರೋಗ್ಯ ವೆಚ್ಚ ವಾರ್ಷಿಕ ರಜೆ ಪಿಂಚಣಿ ವ್ಯವಸ್ಥೆ ಗಳ ಕುರಿತು ಸರ್ಕಾರ ವನ್ನು ಕೂಡಲೇ ಕ್ರಮವನ್ನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ಕಾರ್ಯಕರ್ತರ ಹಲವು ಬೇಡಿಕೆಗಳನ್ನು ಸಭೆಗೆ ಗಮನಕ್ಕೆ ತಂದು ಶೀಘ್ರ ಅವುಗಳಿಗೆ ಪರಿಹಾರವನ್ನು ಒದಗಿಸಿಕೊಡುವಂತೆ ಮನವಿಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸ್ವತಂತ್ರ ಸಂಘಟನೆಯ ರಾಜ್ಯಾಧ್ಯಕ್ಷ ಬಿ ಪ್ರೇಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮಾಮಣಿ ಕೆಎಲ್, ಜಿಲ್ಲಾ ಕಾರ್ಯದರ್ಶಿ ಭಾರತಿ, ತಾಲೂಕ ಅಧ್ಯಕ್ಷ ಶಾರದಾ, ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಹಾಲಗದ್ದೆ ಉಮೇಶ್, ಶ್ರೀ ನಾರಾಯಣ ಗುರು ಮಲೆನಾಡು ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಮುರುಳಿಧರ್ ಮುಂತಾದವರು ಉಪಸ್ಥಿತರಿದ್ದರು.

ANGANWADI..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading