
ಹೊಸನಗರ: ಮಾಜಿ ಸಚಿವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪನವರ ಹುಟ್ಟುಹಬ್ಬವನ್ನು ಬಿಜೆಪಿ ಮಂಡಲ ವಿವಿಧ ಸಮಾಜ ಸೇವ ಕಾರ್ಯಗಳೊಂದಿಗೆ ಇಂದು ಆಚರಿಸಿತು.
ಈ ನಿಮಿತ್ತ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆಯನ್ನ ಸಲ್ಲಿಸಿದ ಅನಂತರ ಹೊಸನಗರ ಸರ್ಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಬಳಿಕ ಪಟ್ಟಣದಲ್ಲಿರುವ ಸೇವಾ ಭಾರತಿ ಗೋಶಾಲೆಗೆ ಹಾಗೂ ರಾಮಚಂದ್ರ ಪುರ ಮಠದ ಗೋಶಾಲೆ ಮೇವುಗಳನ್ನ ನೀಡಿ ಮಾಜಿ ಶಾಸಕರ ಹುಟ್ಟು ಹಬ್ಬವನ್ನು ತಾಲೂಕು ಬಿಜೆಪಿ ಮಂಡಲ ಅರ್ಥಪೂರ್ಣ ವಾಗಿ ಆಚರಿಸಿತು.

ಈ ಸಂದರ್ಭದಲ್ಲಿ ಮುಖಂಡರಾದ ಉಮೇಶ್ ಕಂಚಿಗಾರ್, ಶ್ರೀಪತಿ ರಾವ್ ಏ ವಿ ಮಲ್ಲಿಕಾರ್ಜುನ್ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಲಗದ್ದೆ ಉಮೇಶ್, ಮೋಹನ್ ಮಂಡಾನಿ,ಮನೋದರ್, ಬಸವರಾಜ್, ಮನೋಜ್, ಗಣೇಶ್,ಸತೀಶ್, ಅಭಿಲಾಶ್ ಚಿಕ್ಕಮಣತಿ, ಮುಂತಾದವರು ಉಪಸ್ಥಿತರಿದ್ದರು.
BIRTHDAY..
Discover more from Prasarana news
Subscribe to get the latest posts sent to your email.
