
ಹೊಸನಗರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹೊಸನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಿತು. ನೂತನ ಅಧ್ಯಕ್ಷರಾದ ರವಿ ನಾಗರಕೊಡಿಗೆ ರವರಿಗೆ ಜಿಲ್ಲಾಧ್ಯಕ್ಷರಾದ ವೈದ್ಯನಾಥ್ ಸಂಘದ ರೆಸಲ್ಯೂಷನ್ ಪುಸ್ತಕವನ್ನು ಹಸ್ತಾಂತರಿಸುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಜಿಲ್ಲಾಧ್ಯಕ್ಷರಾದ ವೈದ್ಯನಾಥ್ ರವರು, ಸಂಘದ ಸದಸ್ಯರಿಗೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಇದು ಪತ್ರಕರ್ತರ ಕಲ್ಯಾಣ ಮತ್ತು ಅವರ ಹಕ್ಕುಗಳ ರಕ್ಷಣೆಯ ಬಗ್ಗೆ ಸದಾ ಬದ್ದ ಎಂದ ಅವರು ಪತ್ರಕರ್ತರು ಸಮಾಜದ ಕನ್ನಡಿಯಾಗಿ ಕಾರ್ಯನಿರ್ವಹಿಸುವಾಗ, ಅವರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಕರ್ತವ್ಯ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವುದಾಗಿ ಅವರು ತಿಳಿಸಿದರು.
ಬಳಿಕ ಮಾತನಾಡಿದ ಸಂಘದ ಅಧ್ಯಕ್ಷರಾದ ರವಿ ನಾಗರಕೊಡಿಗೆ
ಪತ್ರಕರ್ತರ ಮೇಲಿನ ಜವಾಬ್ದಾರಿಗಳು ಅರಿತು ಪ್ರತಿಯೊಬ್ಬ ಪತ್ರಕರ್ತನು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು ಜೊತೆಗೆ ಕಾರ್ಯಾಂಗ ಮತ್ತು ಶಾಸಕಾಂಗಗಳ ಕಾರ್ಯವೈಕರಿಯನ್ನು ಜನರಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ತಿಳಿಸಿದರು ಅಲ್ಲದೆ ಜಿಲ್ಲಾ ಸಂಘದ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಸಂಘದ ಪ್ರತಿಯೊಬ್ಬ ಸದಸ್ಯನ ಹಿತವನ್ನು ಕಾಯುವ ಕೆಲಸವನ್ನು ಸಂಘದ ಅಧ್ಯಕ್ಷನಾಗಿ ನಾನು ಮಾಡಲಿದ್ದೇನೆ ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್ ಮತ್ತು ತಾಲೂಕು ಉಸ್ತುವಾರಿಗಳಾದ ಸತ್ಯನಾರಾಯಣ ರವರನ್ನ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಪಂಡಿತ್, ಉಪಾಧ್ಯಕ್ಷರಾದ ಪರುಶುರಾಮ, ಖಜಾಂಚಿ ಶಾಂತರಾಮ್,ಕಾರ್ಯದರ್ಶಿ ಮನು ಎಸ್, ನಾಗೇಶ್ ನಾಯಕ್,ಬಸವರಾಜ್, ಚಿದಾನಂದ ಸ್ವಾಮಿ, ಶಶಿಕುಮಾರ್, ಸುಧೀಂದ್ರ ಹೆಬ್ಬಾರ್ ಮುಂತಾದವರು ಉಪಸ್ಥಿತರಿದ್ದರು
ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನ ಹೋರಾಟಕೇ ಸಂಪೂರ್ಣ ಸಹಕಾರ
ಈ ಸಂದರ್ಭ ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನ ಹೋರಾಟದ ದಿನಾಂಕ ಏಪ್ರಿಲ್ 5 6ಕ್ಕೆ ನಿಗದಿಯಾಗಿದ್ದು ಈ ಹೋರಾಟಕ್ಕೆ ತಾಲೂಕು ಸಂಘದ ಸಂಪೂರ್ಣ ಸಹಕಾರವನ್ನು ನೀಡಲು ನಿರ್ಣಯ ಕೈಗೊಳ್ಳಲಾಯಿತು. ಹಾಗೂ ಜಿಲ್ಲಾ ಸಂಘಕ್ಕೂ ಮನವಿ ಮಾಡಲಾಗಿ, ಕೆಯುಡಬ್ಲ್ಯೂ ಜೆ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರು ತಮ್ಮ ಸಹಮತ ವ್ಯಕ್ತಪಡಿಸಿದರು.
KUWJ HOSANAGARA.
