
ಹೊಸನಗರ:ಹಿಂದೂ ಸಮಾಜಕ್ಕಾಗಿ ಹಿಂದೂ ಸಮಾಜ ಸೇರಿಕೊಂಡು ಉತ್ಸವ ಮಾಡುತ್ತಿರುವುದು ವಿಶೇಷ. ಭವಿಷ್ಯದಲ್ಲಿ ಹಿಂದೂ ಸಮಾಜ ಇನ್ನಷ್ಟು ಜಾಗೃತರಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಅಧಿಕಾರಿ ಶ್ರೀ ಮಂಗೇಶ್ ಭೇನ್ಡೆ ತಿಳಿಸಿದರು.
ಪಟ್ಟಣದ ಗಾಯಿತ್ರಿ ಮಂದಿರದಲ್ಲಿ ಆಯೋಜಿಸಲಾಗಿದ್ದ ವಿರಾಟ್ ಹಿಂದು ಸಮಾಜೋತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ ಹಿಂದೂ ಸಮಾಜದ ಶ್ರೀಮಂತಿಕೆ, ಸಂಘರ್ಷಮಯ ಇತಿಹಾಸ. ಹೋರಾಟ ವಿಷಯಗಳ ಕುರಿತಾಗಿ ಪ್ರಸ್ತಾಪಿಸಿದರು ಅಲ್ಲದೆ ಭವಿಷ್ಯದಲ್ಲಿ ಹಿಂದೂ ಸಮಾಜ ಸಂಘಟಿತವಾಗಬೇಕು ಅಲ್ಲದೆ ಇತಿಹಾಸದ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು. ಕಾರ್ಯಕ್ರಮದಲ್ಲಿ ಹೊಸನಗರದ ವಿವಿಧ ಮಹಿಳಾ ಭಜನಾ ಮಂಡಳಿಯ ಸದಸ್ಯರು ಶ್ರೀಮದ್ಭಗವದ್ಗೀತೆಯ ಹನ್ನೊಂದನೆಯ ಅಧ್ಯಾಯ ಮತ್ತು ಲಲಿತ ಸಹಸ್ರನಾಮವನ್ನು ಸಾಮೂಹಿಕವಾಗಿ ಪಠಣ ಮಾಡಿದರು.ನಂತರ ಸಂವಾದ-ಚರ್ಚೆ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಹಿಂದು ಪಂಚಾಂಗ, ಸಾಮರಸ್ಯ ಮಂತ್ರ, ಗೀತೆ ಮತ್ತು ಶಾಂತಿ ಮಂತ್ರಗಳ ಅಭ್ಯಾಸ ಸೇರಿದ್ದ ಹಿಂದು ಬಂಧುಗಳ ಗಮನ ಸೆಳೆಯಿತು
ಎನ್ ಆರ್ ದೇವನಂದ ಸ್ವಾಗತಿಸಿದರು ಗಣೇಶ ಮಧುಕರ್ ಕಾರ್ಯಕ್ರಮವನ್ನು ನಿರೂಪಿಸಿದರು.
HINDHU SANGAM..
Discover more from Prasarana news
Subscribe to get the latest posts sent to your email.
