VOKKALIGARA SANGHA: ಸಂಘಟನೆಗಳಿಂದ ಸಮಾಜದವನ್ನು ಒಗ್ಗೂಡಿಸಲು ಸಾಧ್ಯ:ಶ್ರೀ ನಾದಮಯಾನಂದನಾಥ ಸ್ವಾಮೀಜಿ.

ಹೊಸನಗರ: ಸಮಾಜವನ್ನು ಒಗ್ಗೂಡಿಸಲು ಸಂಘಟನೆಗಳಿಂದ ಮಾತ್ರ ಸಾಧ್ಯ. ಸಮಾಜ ಒಗ್ಗೂಡುವುದರ ಜೊತೆಗೆ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆಗಳು ಕಾರ್ಯೋನ್ಮುಖವಾಗಬೇಕು ಎಂದು ಶಿವಮೊಗ್ಗ ಶಾಖೆಯ  ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ತಿಳಿಸಿದರು.
ಹೊಸನಗರ ತಾಲೂಕು ಒಕ್ಕಲಿಗ ಸಭಾಭವನಕ್ಕೆ ಭೇಟಿ ನೀಡಿ ನೂತನ ಒಕ್ಕಲಿಗ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಆಶೀರ್ವದಿಸಿ ಮಾತನಾಡಿದ ಅವರು ನಮ್ಮವರೇ ನಮ್ಮ ಏಳಿಗೆಯನ್ನು ಸಹಿಸದೆ ಅಸಹಕಾರವನ್ನು ತೋರಿದಾಗ ನಮ್ಮಲ್ಲಿ ಒಗ್ಗಟ್ಟು ಎಂದಿಗೂ ಸಾಧ್ಯವಿಲ್ಲ ಹಾಗೆಯೇ ಎಲ್ಲಿ ಒಗ್ಗಟ್ಟು ಎಂಬುದು ಸಾಧ್ಯವಿಲ್ಲವೋ ಅಲ್ಲಿ ಅಭಿವೃದ್ಧಿ ಸಹ ಶೂನ್ಯವಾಗಿರುತ್ತದೆ ಎಂದರು.

ಪರಮಪೂಜ್ಯ ಪ್ರಸನ್ನಾಥ ಸ್ವಾಮೀಜಿಯವರ ಸಹಕಾರ ಹಾಗೂ ಮಾರ್ಗದರ್ಶನದಿಂದ ಸಮಾಜ ಗಟ್ಟಿಯಾಗಿ ನಿಂತಿದೆ ಮಠದ ಮಾರ್ಗದರ್ಶನದಲ್ಲಿ ನೀವೆಲ್ಲರೂ ಕ್ರಿಯಾಶೀಲರಾಗಿ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಕರೆಯನ್ನ ನೀಡಿದರು ಅಲ್ಲದೆ ಈ  ಭಾಗದ ವಿದ್ಯಾರ್ಥಿಗಳು ಸಹ ನಮ್ಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣವನ್ನ ಪಡೆಯಬೇಕು ಜೊತೆಗೆ ಸಮಾಜ ಬಾಂಧವರು ಸಮಾಜಮುಖಿ ಕೆಲಸಗಳ ಜೊತೆಗೆ ಮಠದ ಸಂಪರ್ಕವನ್ನು ಸಹ ನಿರಂತರವಾಗಿ ರೂಡಿಸಿಕೊಳ್ಳಬೇಕು ಇದರಿಂದ ಸಮಾಜಕ್ಕೆ ಯಾವುದೇ ಯೋಜನೆ ಹಾಗೂ ಯೋಚನೆಗಳನ್ನು ತರಲು ಸಾಧ್ಯವಾಗುತ್ತದೆ  ಎಂದು ತಿಳಿಸಿದರು ಅಲ್ಲದೆ ಮುಂದಿನ ದಿನಗಳಲ್ಲಿ ಸಂಘದ ಮೂಲಕವಾಗಿ ಪ್ರತಿ ಗ್ರಾಮಗಳಿಗೂ ಭೇಟಿಯನ್ನು ನೀಡಿ ಸಮುದಾಯಕ್ಕೆ ಮಠಗಳ ಮತ್ತು ಸ್ವಾಮೀಜಿಗಳ ಅವಶ್ಯಕತೆ ಏನು ಸಮುದಾಯ ಯಾವ ಹಂತದಲ್ಲಿದೆ ಸಮುದಾಯದ ಬೆಳವಣಿಗೆಗೆ ಸಮಾಜ ಬಾಂಧವರು ಏನು ಮಾಡಬೇಕು ಸಮುದಾಯಕ್ಕೆ ಮೂಲಸೌಕರ್ಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುವ ಕೆಲಸ ಆಗಬೇಕು ಎಂದು ಸೂಚಿಸಿದರು. ಆದ್ದರಿಂದ ಸಮಾಜದ ಪ್ರತಿಯೊಬ್ಬರನ್ನು ಒಗ್ಗೂಡಿಸುವ ಕೆಲಸವನ್ನು ಸಂಘ ಮಾಡಬೇಕು ಎಂದರು ಈ ಸಂದರ್ಭದಲ್ಲಿ  ಸಂಘದ ಅಧ್ಯಕ್ಷರಾದ ಹಾಲಗದ್ದೆ ಉಮೇಶ್
ಉಪಾಧ್ಯಕ್ಷರಾಗದ ಜಯಶೀಲಪ್ಪ ಗೌಡ, ಕಾರ್ಯದರ್ಶಿ ರತ್ನಾಕರ್ ಕುಂಟಿಗೆ,ನಿರ್ದೇಶಕರಾಗದ ವಾಟಗದ್ದೆ ದಿನೇಶ್, ಪೂರ್ಣೇಶ್ ಮಲೆಬೈಲ್, ವೆಂಕಟೇಶ್ ಹೆಗಡೆ, ಎಸಿ ಪ್ರಕಾಶ್, ಕೃಷ್ಣಮೂರ್ತಿ, ವಿಷ್ಣು,ಸುರೇಶ್ ಕಣಕಿ, ಆದಿರಾಜ್, ವೀಣಾ ಪುರುಷೋತ್ತಮ್, ಧರ್ಮಪ್ಪ ನಿಲ್ಸ್ಕಲ, ಶ್ರೀನಿವಾಸ ಪ್ರೀತಮ್,ಲೋಕೇಶ್, ಶ್ರೀಧರ್ ಹಳಗುಂದ, ಪೂರ್ಣೇಶ್, ಮನೋಜ್ ಮುಂತಾದವರು ಉಪಸ್ಥಿತರಿದ್ದರು.

VOKKALIGARA SANGHA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe