94C:ARAGA JNANENDRA: ಅರ್ಹ ಫಲಾನುಭವಿಗಳಿಗೆ 94 ಸಿ ಯಡಿ ಹಕ್ಕು ಪತ್ರ ವಿತರಣೆ….

ಹೊಸನಗರ: ತಾಲೂಕಿನ ಅರ್ಹ 57 ಜನ ಫಲಾನುಭವಿಗಳಿಗೆ ತೀರ್ಥಹಳ್ಳಿ- ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ 94 ಸಿ ಅಡಿಯಲ್ಲಿ ಹಕ್ಕುಪತ್ರವನ್ನು ವಿತರಿಸಿದರು.
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು ಸರಕಾರಿ ಜಾಗದಲ್ಲಿ ಹಲವಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸವಾಗಿರುವ ಕ್ಷೇತ್ರದ ಒಟ್ಟು 57 ಫಲಾನುಭವಿಗಳಿಗೆ ಹಕ್ಕು ಪತ್ರ ಇಂದು ನೀಡಿದ್ದೇವೆ.  ವಾಸ್ತವ್ಯದ ಹಕ್ಕು ಎಲ್ಲರಿಗೂ ಅಗತ್ಯವಾಗಿ ದೊರಕಬೇಕು. ಹಲವು ವರ್ಷಗಳಿಂದ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ವಾಸವಾಗಿದ್ದರೂ ಕೂಡ ಹಕ್ಕು ಪತ್ರ ಇಲ್ಲದೇ ಸರಕಾರದ ಯಾವುದೇ ಸೌಲಭ್ಯ ಪಡೆಯದೇ ಇರುವ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ಕಚೇರಿಯಿಂದ ಕಚೇರಿಗೆ ಓಡಾಡುತ್ತಿರುವುದನ್ನು ಕಂಡಿದ್ದೇನೆ. ಕ್ಷೇತ್ರ ವ್ಯಾಪ್ತಿಯಲ್ಲಿ ಯಾವೊಂದೂ 94 ಸಿ ಅರ್ಜಿದಾರರು ಹಕ್ಕು ಪತ್ರ ವಂಚಿತರಾಗಿ ಉಳಿದು ಕೊಳ್ಳಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ಹಕ್ಕು ಪತ್ರ ಒದಗಿಸಿದ್ದೇವೆ.
ರಾಜಕೀಯ ಜೀವನದಲ್ಲಿ ಅರ್ಹ ಫಲಾನುಭವಿಗಳಿಗೆ ಭೂಮಿಯ ಮಾಲೀಕತ್ವವನ್ನು ನೀಡುವ ಹಕ್ಕುಪತ್ರ ವಿತರಣೆ ಕೆಲಸ ಶ್ರೇಷ್ಠವಾದ ಕೆಲಸವಾಗಿದೆ ಎಂದರು.
ಅದರಂತೆ ಪಕ್ಕು ಪತ್ರವನ್ನು ಪಡೆದುಕೊಂಡಂತಹ ಫಲಾನುಭವಿಗಳು ತಮ್ಮ ತಮ್ಮ ಪಂಚಾಯಿತಿಗಳಲ್ಲಿ ಅವುಗಳನ್ನು ಖಾತೆ ಮಾಡಿಕೊಳ್ಳುವ ಕೆಲಸವನ್ನು ಮಾಡಬೇಕು ಈ ಕುರಿತಾಗಿ ನಿಮಗೆ ಯಾವುದೇ ತೊಂದರೆ ಉಂಟಾದಲ್ಲಿ ನನ್ನ ಗಮನಕ್ಕೆ ತನ್ನಿ ಎಂದರು. ಹಾಗೆಯೇ ಬಾಕಿ ಉಳಿದ ಅರ್ಹ ಫಲಾನುಭವಿಗಳಿಗೆ ತ್ವರಿತವಾಗಿ 94 ಸಿ ಅಡಿಯಲ್ಲಿ ಹಕ್ಕುಪತ್ರ ಮಂಜೂರಾತಿಗೆ ಕ್ರಮವನ್ನ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ರಶ್ಮಿ  ಹೆಚ್. ಜೇ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

94C:ARAGA JNANENDRA.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading