
ಹೊಸನಗರ: ಪಟ್ಟಣ ಸಮೀಪ ಗೇರುಪುರದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾಗಾಂಧಿ ವಸತಿ ಶಾಲೆ ಕಟ್ಟಡ ಕಾಮಗಾರಿಯನ್ನು ನಿನ್ನೆ ಶಾಸಕ ಗೋಪಾಲಕೃಷ್ಣ ಬೇಳೂರು ವೀಕ್ಷಿಸಿ
ಫೆಬ್ರವರಿ ಅಂತ್ಯದೊಳಗೆ ಇಂದಿರಾ ಗಾಂಧಿ ವಸತಿ ಶಾಲೆ ಉದ್ಘಾಟನೆಯನ್ನು ಮಾಡಲಿದ್ದೇವೆ ಎಂದು ತಿಳಿಸಿದರು.
ಬಳಿಕ ಗುತ್ತಿಗೆದಾರರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದ ಅವರು ವಸತಿ ಶಾಲೆ ಕಾಮಗಾರಿ ಉತ್ತಮ ಗುಣಮಟ್ಟದಾಗಿರಬೇಕು ಇದು ಪೂರ್ಣ ಮಲೆನಾಡ ಭಾಗವಾಗಿದ್ದರಿಂದ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ ಮುಂದೆ ಕಟ್ಟಡಗಳು ಸೋರುವಂತಹ ಸ್ಥಿತಿಗೆ ಬಾರದಂತೆ ಕಾಮಗಾರಿಗಳನ್ನ ಮಾಡಬೇಕು.
ಬಡ ಹಾಗೂ ಮಧ್ಯಮ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸನಗರ ಪಟ್ಟಣ ಸಮೀಪ ವಿರುವ ಇಲ್ಲಿ ಇಂದಿರಾ ಗಾಂಧಿ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ

ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ಆರಂಭಿಸುತ್ತಿರುವ ಇಂದಿರಾ ಗಾಂಧಿ ವಸತಿ ಶಾಲೆ
ಸುಮಾರು 250 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಕಾಮಗಾರಿಯನ್ನು ಇನ್ನು ಎರಡರಿಂದ ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಿ ವಿದ್ಯಾರ್ಥಿಗಳಿಗೆ ಅನುಕೂಲವನ್ನು ಮಾಡಿಕೊಡಬೇಕು ಆ ನಿಟ್ಟಿನಲ್ಲಿ ಬಾಕಿ ಇರುವ ಕೆಲಸಗಳಿಗೆ ಇನ್ನಷ್ಟು ವೇಗವನ್ನ ನೀಡುವಂತೆ ಸೂಚಿಸಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ ಹಾಲೇಶ್, ತಾ ಪಂ ಇ ಓ ನರೇಂದ್ರ ಕುಮಾರ್, ಸುಮಾ ಸುಬ್ರಮಣ್ಯ, ಸಾಧಿಕ್, ಮಾಸ್ತಿಕಟ್ಟೆ ಸುಬ್ರಮಣ್ಯ, ಮಹೇಂದ್ರ, ಸದಾಶಿವ, ಧರ್ಮ, ಚೇತನ್ ದಾಸ್ ಉಪಸ್ಥಿತರಿದ್ದರು.
INAUGURATION
