SBI HOSANAGARA:ಹೊಸನಗರ ಎಸ್ ಬಿ ಐ ಶಾಖೆಯಲ್ಲಿ ರೈತ ದಿನಾಚರಣೆ ಆಚರಣೆ..

ಹೊಸನಗರ:ರೈತ ದಿನಾಚರಣೆ ಹಿನ್ನೆಲೆಯಲ್ಲಿ ಹೊಸನಗರ ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಅನ್ನದಾತ ಮಹೋತ್ಸವ ವನ್ನು ಆಚರಿಸಲಾಯಿತು.
ಈ ಸಮಯದಲ್ಲಿ ಬ್ಯಾಂಕ್ ನ ವ್ಯವಸ್ಥಾಪಕ ಶ್ರೀ ಮಾಧವ ಅವರು ರೈತರಿಗೆ ಶುಭಕೋರಿದರು, .
ಎಸ್‌ಬಿಐ ಹೊಸನಗರ ಶಾಖೆ ಆವರಣದಲ್ಲಿ ಮಂಗಳವಾರ ಆಯೋಜಿದ್ದ  ಅನ್ನದಾತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿವಿಧ ರೈತಪರ ಇರುವ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. ಕಡಿಮೆ ಬಡ್ಡಿಯ ತ್ವರಿತವಾಗಿ ಬಂಗಾರ ಅಡಮಾನ ಸಾಲ ಸಹಿತ ಇತರೆ ಯೋಜನೆಗಳ ಬಗ್ಗೆಯೂ ಮಾಹಿತಿ ಒದಗಿಸಿದರು. ‘ಕೃಷಿ ಚಟುವಟಿಕೆಗಳಿಗೆ ಬ್ಯಾಂಕ್ ನೀಡುವ  ಸಾಲವನ್ನು ರೈತರು ದಕ್ಷವಾಗಿ ಬಳಸಿ, ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಉತ್ತಮ ಬೆಲೆಗೆ ಮಾರಾಟ ಮಾಡಬೇಕು. ಲಾಭಾಂಶವನ್ನು ಹೆಚ್ಚಿಸಿಕೊಳ್ಳಬೇಕು. ಬೆಳೆ ಸಂಸ್ಕರಣ ಘಟಕ, ಆಹಾರೋದ್ಯಮ ಸ್ಥಾಪನೆಗೆ, ಹೈನುಗಾರಿಕೆ ಹಾಗೂ ಕುಕ್ಕುಟೋದ್ಯಮ ಸ್ಥಾಪಿಸಲು ಸಾಲ ಒದಗಿಸುತ್ತಿದೆ. ರೈತರು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ತಿಳಿಸಿದರು.
ಈ ಸಮಯದಲ್ಲಿ ಬ್ಯಾಂಕ್ ನ ಅಧಿಕಾರಿಗಳು ಸರ್ವೇಶ್, ಆರ್ಯ, ಚೈತನ್ಯ, ಪ್ರತೀಕ್ಷಾ ಮತ್ತು ಮಧುಕರ್ ಉಪಸ್ಥಿತರಿದ್ದರು. ಗಣೇಶ್ ಮಧುಕರ್ ನಿರೂಪಿಸಿ ವಂದಿಸಿದರು..

SBI HOSANAGARA..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading