
ಹೊಸನಗರ: ಮ್ಯಾಮ್ ಕೋಸ್ ಆಡಳಿತ ಮಂಡಳಿ ಚುನಾವಣೆ ಫೆಬ್ರವರಿ 4 ರಂದು ನಡೆಯುತ್ತಿದ್ದು ಈ ಬಾರಿ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಕಾಂಗ್ರೆಸ್ ಬೆಂಬಲಿತ 19 ಅಭ್ಯರ್ಥಿಗಳನ್ನ ಬೆಂಬಲಿಸಿ ಅವರಿಗೆ ಮತ ನೀಡುವ ಮೂಲಕ ಸಹಕರಿಸುವಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕಲಗೋಡು ರತ್ನಾಕರ್ ಮತದಾರರಲ್ಲಿ ಮನವಿಯನ್ನ ಮಾಡಿದ್ದಾರೆ.
ಈ ಕುರಿತಾಗಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದವರು ಮಲೆನಾಡ ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತವನ್ನು ಬೆಳೆಗಾರರ ಸ್ನೇಹ ಆಗಿಸುವ ಸದುದ್ದೇಶದಿಂದ ಅಲ್ಲದೆ 20 ವರ್ಷಗಳಿಂದ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಯನ್ನು ಬದಲಾಯಿಸುವ ಸದುದ್ದೇಶದಿಂದ ಸಹಕಾರಿ ಕ್ಷೇತ್ರಕ್ಕೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಅಭ್ಯರ್ಥಿಗಳನ್ನು ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಅಡಿಕೆ ಬೆಳೆಗಾರರಿಗೆ ಅನುಕೂಲವಾಗುವಂತಹ ಮ್ಯಾಮ್ ಕೋಸ್ ಆಡಳಿತಕ್ಕೆ ಹಲವಾರು ಬದಲಾವಣೆಗಳನ್ನ ತರುವ ಸಂಕಲ್ಪ ನಮ್ಮದಾಗಿದೆ.
ಅಡಿಕೆ ಮೌಲ್ಯವರ್ಧನೆಗೆ ಉತ್ತೇಜನ ನೀಡುವುದು ಹಾಗೂ ಮುಕ್ತ ವಾಣಿಜ್ಯ ಒಪ್ಪಂದಗಳ ರಿಯಾಯಿತಿ ದುರ್ಬಳಕೆ ಮಾಡಿಕೊಂಡು ಆಮದು ಆಗುತ್ತಿರುವ ಅಡಿಕೆ ನಿಯಂತ್ರಣಕ್ಕೆ ಒತ್ತಾಯವನ್ನ ಏರುವುದು ಹೀಗೆ ಇನ್ನು ಹತ್ತು ಹಲವಾರು ಯೋಜನೆಗಳನ್ನ ಷೇರುದಾರರ ಹಿತಕ್ಕಾಗಿ ಜಾರಿಗೆ ತರುವಂತಹ ಉದ್ದೇಶವನ್ನ ರಾಷ್ಟ್ರೀಯ ಸಹಕಾರಿ ಪ್ರತಿಷ್ಠಾನದ ಉದ್ದೇಶವಾಗಿದೆ ಎಂದರು. ಈ ಸಂದರ್ಭದಲ್ಲಿ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮೌಳಿ, ಶಿಮುಲ್ ಅಧ್ಯಕ್ಷರಾಗಿರುವ ವಿದ್ಯಾಧರ್, ಏರಿಗೆ ಉಮೇಶ್, ಮಾಸ್ತಿ ಕಟ್ಟೆ ಸುಬ್ರಮಣ್ಯ, ಚಿದಂಬರ, ಅಭ್ಯರ್ಥಿಗಳಾಗಿರುವಂತ ವರ್ತೇಶ್ ಗೌಡ್ರು ,ಈಶ್ವರಪ್ಪ ಗೌಡ್ರು ಎಂ ಪಿ ಸುರೇಶ್, ಸದಾಶಿವ ಶೆಟ್ಟಿ, ಉಬೇದ್, ಗುರು ಜಯನಗರ ಉಪಸ್ಥಿತರಿದ್ದರು..
MOMCOS ELECTION...
Discover more from Prasarana news
Subscribe to get the latest posts sent to your email.
