INFORMATION AND COMMUNICATION:ಚುಂಚಾದ್ರಿ ಮಹಿಳಾ ಒಕ್ಕಲಿಗರ ಸಂಘದಿಂದ ಮಹಿಳೆಯರ ಆರೋಗ್ಯಕರ ಜೀವನ ಕುರಿತು ಮಾಹಿತಿ ಮತ್ತು ಸಂವಾದ ಕಾರ್ಯಕ್ರಮ.

ಹೊಸನಗರ: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಚುಂಚಾದ್ರಿ ಮಹಿಳಾ ಒಕ್ಕಲಿಗರ ಸಂಘ ಹಾಗೂ ಜೆಸಿಐ ಹೊಸನಗರ ಕೊಡಚಾದ್ರಿ ಸಹಯೋಗದೊಂದಿಗೆ ಮಹಿಳೆಯರ ಆರೋಗ್ಯಕರ ಜೀವನ ಕುರಿತ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮವನ್ನು ಸ್ಪೋರ್ಟ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಮಹಿಳೆಯರ ಆರೋಗ್ಯಕರ ಜೀವನಶೈಲಿ ಹೇಗಿರಬೇಕು ಹಾಗೂ ಮತ್ತು ಅವುಗಳಿಗಾಗಿ ಮಹಿಳೆಯರು ಅನುಸರಿಸಬೇಕಾದ ವಿಷಯಗಳ ಬಗ್ಗೆ ಹೊಸನಗರ ಆರೋಗ್ಯ ಇಲಾಖೆಯ ಸುಷ್ಮಾ ಶ್ರೀನಿವಾಸ್ ಮಾಹಿತಿಯನ್ನು ನೀಡುವ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಿಳೆಯರೊಂದಿಗೆ ಸಂವಾದವನ್ನು ನಡೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚುಂಚಾದ್ರಿ ಮಹಿಳಾ ಒಕ್ಕಲಿಗರ ಸಂಘ ಹೊಸನಗರದ ಅಧ್ಯಕ್ಷರಾದ ಮೈನಾವತಿ ರಾಜಮೂರ್ತಿ ವಹಿಸಿದ್ದರು ಕಾರ್ಯಕ್ರಮದಲ್ಲಿ ಜೆಸಿಐ ಹೊಸನಗರ ಕೊಡಚಾದ್ರಿಯ ಕಾರ್ಯದರ್ಶಿ ಜೆ ಸಿ ಮಹೇಶ್ ಮಲ್ನಾಡ್, ಲೇಡಿ ಜೇಸೀಸ್ ಅಧ್ಯಕ್ಷೆ ಜೆ ಸಿ ಶೈಲಾ ಕೇಶವ್, ಜೆ ಸಿ ಜ್ಯೋತಿ ಪೂರ್ಣೇಶ್, ಜೆ ಸಿ ರೇಷ್ಮಾ ಹರೀಶ್ ಮುಂತಾದವರು ಉಪಸ್ಥಿತರಿದ್ದರು..

INFORMATION AND COMMUNICATION.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading