
ಹೊಸನಗರ: ತಾಲ್ಲೂಕಿನ ಮಾರುತಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರವಣ ಕೆರೆ ಜೀರ್ಣೋದ್ಧಾರ ಕಾಮಗಾರಿಯುನ್ನು ಸಾರ ಸಂಸ್ಥೆ, ಏ ಸಿ ಐ ವರ್ಲ್ಡ್ ವೈಡ್ ಮತ್ತು ಸುತ್ತಲಿನ ಗ್ರಾಮಸ್ಥರ ಸಹಕಾರದಲ್ಲಿ ಈ ಕಾಮಗಾರಿಯನ್ನು ಆರಂಭಿಸಲಾಗಿದೆ.
ಕೆರೆ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆಯನ್ನು ನೀಡಿ ಮಾತನಾಡಿದ ಶ್ರವಣ ಕೆರೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ ಹೆಗಡೆ ನೀರು ಅತ್ಯಮೂಲ್ಯ, ಅದು ಅಲ್ಲದೆ ಕೃಷಿ ಕೆಲಸ ಮಾಡುವ ರೈತರಿಗೆ ನೀರು ಉತ್ತಮ ರೀತಿಯಲ್ಲಿ ಒದಗಿದರೆ ಅವರ ಬದುಕು ಹಸನಾಗುವದರಲ್ಲಿ ಎರಡು ಮಾತಿಲ್ಲ. ಆದ್ದರಿಂದ ಈ ಕಾಮಗಾರಿಯನ್ನು ಆರಂಭ ಮಾಡಿದ್ದೇವೆ, ಇದರಿಂದ ಸುತ್ತಲಿನ ಗ್ರಾಮಸ್ಥರಿಗೆ ಮಾತ್ರವಲ್ಲದೆ, ಪ್ರಾಣಿ ಪಕ್ಷಿಗಳಿಗೆ ಬಾಯರಿಕೆ ನೀಗಿಸುವ ತಾಣವಾಗಲಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಕೃಷ್ಣ ಹಳ್ಳಿ , ಆರ್ ಜಿ ಭಟ್, ಶ್ರೀನಾಥ ಭಟ್, ವಿಶ್ವೇಶ್ವರ,ಎಂ ಕೆ ಶಿವಪ್ಪ,ಆರ್ಚಕರಾದ ಕೃಷ್ಣಮೂರ್ತಿ ಭಟ್,ಹಿಟಾಚಿ ಆಪರೇಟರ್ ಶರಣಪ್ಪ, ಟಿಪ್ಪರ್ ಆಪರೇಟರ್ ರವಿ, ಸುರೇಶ, ಗಣೇಶ್ ಮತ್ತು ಸಾರ ಸಂಸ್ಥೆಯ ಶಿವಕುಮಾರ್ ಜೊತೆಗಿದ್ದರು.
SARA:ACI WORLDWIDE
Discover more from Prasarana news
Subscribe to get the latest posts sent to your email.
