NAGARA POLICE:ಕಳವು ಪ್ರಕರಣ ಆರೋಪಿ ಬಂಧನ..
ಒಂದು ಲಕ್ಷ ಮೌಲ್ಯದ ಬಂಗಾರ ಹಾಗೂ ಬೈಕ್ ವಶ…

ಹೊಸನಗರ: ಮನೆ ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಿದ್ದಾರೆ.

ಮಾ.03 ರಂದು ತಾಲ್ಲೂಕಿನ ಮತ್ತಿಕೈ ಗ್ರಾಮದ ದೊಡ್ಡಮನೆ ವಾಸಿ ಪರಮೇಶ್ವರಯ್ಯ ಅವರು ಸಂಬಂಧಿಕರ ಮನೆಯಲ್ಲಿ ಉಪನಯನ ಕಾರ್ಯಕ್ರಮಕ್ಕೆಂದು ತೆರಳಿದ್ದು ಕಾರ್ಯಕ್ರಮ ಮುಗಿಸಿ ಮನೆಗೆ ವಾಪಾಸ್ ಬಂದಾಗ ಕಳ್ಳತನ ಆಗಿರುವುದು ತಿಳಿದಿದೆ. ಮನೆಯ ಬಾಗಿಲು ತೆರೆದಿದ್ದು ಮರದ ಕಪಾಟಿನಲ್ಲಿದ್ದ ಸುಮಾರು ರೂ.60 ಸಾವಿರ  ಮೌಲ್ಯದ 12 ಗ್ರಾಂ ತೂಕದ ಚಿನ್ನದ ಸರ ಹಾಗೂ ರೂ.15 ಸಾವಿರ ನಗದು ಕಳ್ಳತನವಾಗಿದ್ದು ಮಾಲು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಾ.20 ರಂದು ಪ್ರಕರಣದ ಆರೋಪಿ ಕಟ್ಟಿನಹೊಳೆ ಗ್ರಾಮದ ಚಾಲಕ ಕೆ.ಆರ್ ಶರತ್ (26) ಈತನನ್ನು ಬಂಧಿಸಿ ಆರೋಪಿಯಿಂದ ಅಂದಾಜು ರೂ. 1 ಲಕ್ಷ  ಮೌಲ್ಯದ 12 ಗ್ರಾಂ ತೂಕದ ಬಂಗಾರದ ಸರ  ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಪಡಿಸಿಕೊಂಡಿದ್ದಾರೆ‌.

ಹೊಸನಗರ ಸಿಪಿಐ ಗುರಣ್ಣ ಎಸ್ ಹೆಬ್ಬಾಳ್ ಮೇಲ್ವಿಚಾರಣೆಯಲ್ಲಿ ಆರೋಪಿ ಪತ್ತೆ ಮತ್ತು ಬಂಧನ ಕಾರ್ಯ ನಡೆಸಲಾಗಿದ್ದು, ಪತ್ತೆ ಕಾರ್ಯದಲ್ಲಿ ನಗರ ಪಿಎಸ್ಐ ಶಿವಾನಂದ ಕೋಳಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ  ಎಎಸ್ ಐ ಕುಮಾರ್ ಟಿ ಎಸ್ , ಶೇಖ್ ಅಮೀರ್ ಜಾನ್ ಕಿರಣ್ ಕುಮಾರ್ , ವಿಶ್ವನಾಥ್ , ಪ್ರವೀಣ್ ಕುಮಾರ್ ,ಶಿವಕುಮಾರ್ ನಾಯ್ಕ್ ,ರವಿಚಂದ್ರನ್ ,ಸುಜಯ್ ಕುಮಾರ್ , ಪ್ರಜ್ವಲ್ ,ಸಚಿನ್ ಹಾಗೂ ಶಶಿಧರ್ ಇದ್ದರು. ಪಾಲ್ಗೊಂಡಿದ್ದರು. . 

NAGARA POLICE.



Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe