
ಹೊಸನಗರ: ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ ಗಾಯತ್ರಿ ಮಂದಿರದಲ್ಲಿ ನಡೆಯಲಿದ್ದು ಈ ಬಾರಿಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ ಅಕಾಡೆಮಿ ಸದಸ್ಯ, ಖ್ಯಾತ ಯಕ್ಷಗಾನ ಅರ್ಥದಾರಿ, ಪ್ರಸಂಗ ಕರ್ತೃ, ಕಾದಂಬರಿಕಾರ ಮೂಲತಃ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ದರೇಮನೆ ಡಿ ಎಸ್ ಶ್ರೀಧರ್ ಅವರು ವಹಿಸಲಿದ್ದು
ಬೆಳಿಗ್ಗೆ 9.30 ಸಮ್ಮೇಳನ ಅಧ್ಯಕ್ಷರ ಭವ್ಯ ಮೆರವಣಿಗೆ ಹಳೆ ಕೋರ್ಟ್ ವೃತ್ತದಿಂದ ಪ್ರಾರಂಭವಾಗಲಿದ್ದು ಮೆರವಣಿಗೆಗೆ ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷರಾದ ಹ ಅ ಪಾಟೀಲ್ ಚಾಲನೆಯನ್ನು ನೀಡಲಿದ್ದು ಮೆರವಣಿಗೆಯಲ್ಲಿ ಪಟ್ಟಣ ಪಂಚಾಯಿತಿನ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ತಾಲೂಕಿನ ಪ್ರಮುಖರು ಭಾಗವಹಿಸಲಿದ್ದಾರೆ..
ಕಾರ್ಯಕ್ರಮದ ಉದ್ಘಾಟನೆ ಬೆಳಿಗ್ಗೆ.10:30 ಕೆ ನೆರವೇರಲಿದ್ದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕಾರ್ಯಕ್ರಮನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ವಹಿಸಲಿದ್ದು.ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಗಣೇಶ್ ಮೂರ್ತಿ ಪ್ರಾಸ್ತಾವಿಕ ನುಡಿಯನ್ನಡಲಿದ್ದಾರೆ
ಮಧ್ಯಾಹ್ನ 12 ಗಂಟೆಯಿಂದ ಸಮ್ಮೇಳನ ಅಧ್ಯಕ್ಷರು ಸಾಹಿತ್ಯ ಅವಲೋಕನ, ಅಸ್ತಿತ್ವ ಕಳೆದುಕೊಂಡ ತಾಲೂಕು ಹೊಸನಗರ, ಆಧುನಿಕ ಮಾನವನ ಮಾನಸಿಕ ಸ್ಥಿತಿಗತಿ ವಿಷಯಗಳ ಗೋಷ್ಠಿಗಳು ನಡೆಯಲಿದ್ದು ಸಮಾರೋಪ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಪಾಲ್ಗೊಳ್ಳಲಿದ್ದಾರೆ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಸಮಾರೋಪ ಸಮಾರಂಭದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ ಸಾರ್ವಜನಿಕರು ಸಾಹಿತ್ಯ ಆಸಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಿಕೊಡುವಂತೆ ಹೊಸನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ ಗಣೇಶ್ ಮೂರ್ತಿ ಕೋರಿದ್ದಾರೆ.
SAHITYA SAMMELANA..
Discover more from Prasarana news
Subscribe to get the latest posts sent to your email.
