
ರಿಪ್ಪನ್‌ಪೇಟೆ;-ಸಮೀಪದ ಅಡ್ಡೇರಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸರ್ಕಾರಿ ಶಾಲಾ ಕಟ್ಟಡದ ಕುಸಿದು ಬಿದ್ದ ಘಟನೆ ನಡೆದಿದೆ.
ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡ್ಡೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಕಟ್ಟಡದ ಗೋಡೆಗಳು ಕುಸಿದು ಬಿದ್ದಿವೆ.ರಾತ್ರಿ ವೇಳೆ ಈ ಘಟನೆ ನಡೆದಿದ್ದರಿಂದ ದೊಡ್ಡ ಅನಾಹುತವೊAದು ತಪ್ಪಿದೆ.ಈ ಶಾಲೆಯಲ್ಲಿ ಪ್ರಸ್ತುತ 17 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು ಭಾರಿ ಅನಾಹುತದಿಂದ ಪಾರಾಗಿದ್ದಾರೆ.
ಶಾಲೆಯಕಟ್ಟಡ ಸಂಪೂರ್ಣ ಹಾನಿಗೊಳಗಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರ ಕೊಠಡಿಯಲ್ಲಿತಾತ್ಕಾಲಿಕವಾಗಿ ಪಾಠಕ್ಕೆ ಕೇಳುತ್ತಿದ್ದಾರೆ.ಇದರಿಂದ ಮಕ್ಕಳಿಗೆ ಓದಲು ಸೂಕ್ತ ಪರಿಹಾರವೇ ಇಲ್ಲದಂತಾಗಿದೆ.ಪೋಷಕರು ಮತ್ತುಗ್ರಾಮಸ್ಥರು ಈ ಕುರಿತು ತೀವ್ರ ಅತಂಕ ವ್ಯಕ್ತಪಡಿಸಿ.ತುರ್ತು ಆಧಾರದ ಮೇಲೆ ಮಕ್ಕಳಿಗೆ ಸುರಕ್ಷಿತ ತರಗತಿ ಕೊಠಡಿ ಕಲ್ಪಿಸುವಂತೆ ಆಧಿಕಾರಿಗಳಲ್ಲಿ ಒತ್ತಾಯಿಸಿದ್ದಾರೆ.
ಘಟನೆ ನಂತರ ಕAದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಆಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶಾಲೆಗೆ ಶೀಘ್ರದಲ್ಲಿ ಮರುಕಟ್ಟಡ ನಿರ್ಮಾಣ ಮಾಡಬೇಕೆಂದುಅವರು ಭರವಸೆ ನೀಡಿದ್ದಾರೆ...
RIPPONPET NEWS..
Discover more from Prasarana news
Subscribe to get the latest posts sent to your email.
