HOSANAGARA NEWS: ನಟಿ ಸರೋಜಾ ದೇವಿ ನಿಧನ:  ಚುಂಚಾದ್ರಿ ಮಹಿಳಾ ಸಂಘದಿಂದ ಸಂತಾಪ..

ಹೊಸನಗರ:ಬಹುಭಾಷಾ ನಟಿ ಬಿ. ಸರೋಜಾದೇವಿ (87) ಅವರು ಸೋಮವಾರ ನಿಧನರಾಗಿಧು. ಅವರ ನಿಧನಕ್ಕೆ   ಚುಂಚಾದ್ರಿ ಮಹಿಳಾ ಸಂಘ ಸಂತಾಪ ಸೂಚಿಸಿದೆ.
ಹಿರಿಯ ನಟಿಯ ಅಗಲಿಕೆಗೆ ಶ್ರದ್ದಾಂಜಲಿ ಸಭೆ ನಡೆಸಿ ಮಾತನಾಡಿದ ಚುಂಚಾದ್ರಿ ಮಹಿಳಾ ಸಂಘದ ಅಧ್ಯಕ್ಷರಾದ ಮೈನಾವತಿ ರಾಜಮೂರ್ತಿ. ಆರೂವರೆ ದಶಕಗಳು ಚಿತ್ರರಂಗದಲ್ಲಿ‌ ಕ್ರಿಯಾಶೀಲರಾಗಿದ್ದ ಸರೋಜಾದೇವಿ ಅವರು, ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಅವರೊಬ್ಬ ಲೆಜೆಂಡರಿ ನಟಿ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ ಎಂದರು.
ಬಳಿಕ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚಾರಣೆ ಮಾಡಿದರು.
ಈ ಸಂದರ್ಭದಲ್ಲಿ ಜ್ಯೋತಿ ಪೂರ್ಣೇಶ್, ರೇಷ್ಮಾ ಹರೀಶ್, ಚಂದ್ರಕಲಾ ಮಹೇಶ್, ರತಿದೇವಿ, ವಿಮಲಾ ಜ್ಞಾನೇಂದ್ರಪ್ಪ, ವೇಧಾವತಿ ಸುಬ್ಬಯ್ಯ ಗೌಡ, ಶ್ರೀಮತಿ ನಾಗೇಶ್, ಚಿತ್ರಾ ಧನಂಜಯ, ಸವಿತಾ ಮಹಾಬಲ, ರೇಖಾ ಹರೀಶ್, ಪ್ರಿಥ್ವಿ ಕೃಷ್ಣಮೂರ್ತಿ, ಪೂಜಾ  ಮಧು, ಶ್ರೀಮತಿ ಸೋಮಣ್ಣ ಹಾಜರಿದ್ದರು.

HOSANAGARA NEWS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading