
ಹೊಸನಗರ: ತಾಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗೊರಗೋಡು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದು ಹೊತ್ತಿ ಉರಿದಿದ್ದು ಲಕ್ಷಾಂತರ ರೂಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಗ್ರಾಮದ ಲಕ್ಷ್ಮಣ್ ಗೌಡ ಎಂಬುವರ ಮಾಲಿಕತ್ವದ ಮನೆಯಲ್ಲಿ ಶೇಷ ಪವನ್ ಹಾಗೂ ಪ್ರತಿಭಾ ದಂಪತಿಗಳು ಬಾಡಿಗೆಗೆ ವಾಸವಾಗಿದ್ದರು. ಸೋನಲೆ ಗ್ರಾಮದಲ್ಲಿ ಶೇಷ ಪವನ್ ಹಾಗೂ ಪ್ರತಿಭಾ ದಂಪತಿಗಳು ತೋಟವನ್ನು ಹೊಂದಿದ್ದು ಅಲ್ಲಿಯ ಹೊಸ ಮನೆ ಕಾಮಗಾರಿಯನ್ನು ಪ್ರಾರಂಭಿಸಿದ್ದರು ಈ ಹಿನ್ನೆಲೆ ದಿನನಿತ್ಯ ಹೊಸ ಮನೆ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಲು ತೆರಳುತ್ತಿದ್ದರು ಅದರಂತೆ ಇಂದು ಮುಂಜಾನೆ 11:00 ಗಂಟೆಗೆ ನೂತನ ಮನೆ ಕಾಮಗಾರಿ ಹಾಗೂ ತಮ್ಮ ತೋಟದ ಕೆಲಸಕ್ಕಾಗಿ ತೆರಳಿದ ವೇಳೆ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮನೆಗೆ ಬೆಂಕಿ ತಗುಲಿದೆ ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯರೊಬ್ಬರು ಅದನ್ನ ಗಮನಿಸಿ ಅಗ್ನಿಶಾಮಕ ದಳ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ ಕೂಡಲೇ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ನಡುವೆ ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳು ಹಾಗೂ ಹೊಸ ಮನೆ ನಿರ್ಮಾಣಕ್ಕೆ ತಂದಂತಹ 2 ಲಕ್ಷಕ್ಕೂ ಅಧಿಕ ಮೌಲ್ಯದ ಎಲೆಕ್ಟ್ರಿಕಲ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಈ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪ ಏನ್, ಸಿಬ್ಬಂದಿಗಳಾದ ಕೇ ಟಿ .ರಾಜಪ್ಪ, ನರೇಶ್, ಮಂಜುನಾಥ್ ಬಿ, ಆಂಜನೇಯ ಬಿ ಸಿ, ಭೀಷ್ಮ ಚಾರಿ, ಪೊಲೀಸ್ ಸಿಬ್ಬಂದಿಗಳಾದ ಶಿವಕುಮಾರ್, ಮಹಿಳಾಪೇದೆ ಯಶೋದಮ್ಮ ಪಾಲ್ಗೊಂಡಿದ್ದರು..
SHORT CIRCUIT...
Discover more from Prasarana news
Subscribe to get the latest posts sent to your email.
