
ಹೊಸನಗರ:ಜನಪದ ಕೇವಲ ಜನಪದವಲ್ಲ, ಅದು ಜಾಣರಪದ, ಜಗುಲಿಯ ಪದ, ಜ್ಞಾನವಂತರ ಪದ,ವಿಜ್ಞಾನ ಪದ, ವಿಶೇಷ ಪದ, ಮತ್ತೆ ಮತ್ತೆ ವಿಶ್ಲೇಷಣೆಗೆ ಒಳಪಡುವ ಪದ, ಜನನಿಯರ ಪದ, ಸುಜ್ಞಾನ ಪದ, ಜತನದಿಂದ ನಾವು ನೀವೆಲ್ಲರೂ ಕಾಪಿಟ್ಟುಕೊಳ್ಳುವ ಪದವಾಗಿದೆ. ಜನವಾಣಿಯಾದ ಇದು ವಿಶ್ವದ ಎಲ್ಲಾ ಭಾಷೆಗೆ ಬೇರಾದರೆ, ಇಂದಿನ ಕವಿವಾಣಿ ಹೂವಾಗಿದೆ, ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎಂದು ಡಾ ಕೆ ಶ್ರೀಪತಿ ಹಳಗುಂದ ಹೇಳಿದರು. ಅವರು ಇಂದು ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೆಂಗಳೂರಿನ ಕರ್ನಾಟಕ ಜಾನಪದ ಪರಿಷತ್ತ, ಶಿವಮೊಗ್ಗ ಜಿಲ್ಲಾ ಘಟಕ, ಹೊಸನಗರ ತಾಲ್ಲೂಕು ಘಟಕ, ಕಾಲೇಜಿನ ಐ, ಕ್ಯು, ಎ, ಸಿ. ಮತ್ತು ಕನ್ನಡ ವಿಭಾಗದಸಹಯೋಗದಲ್ಲಿ ನೆಡೆದ ವಿಶ್ವ ಜಾನಪದ ದಿನಾಚರಣೆಯಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿ, ಅಕ್ಷರದ ಅರಿವು ಇಲ್ಲದೆಯೂ ಅಪರಮಿತ ಸಾಹಿತ್ಯಕ್ಕೆ ಕೊಡುಗೆ ನೀಡಿದವರು ನಮ್ಮ ಹಿಂದಿನ ಜನಪದರು ಎಂದು, ಕವಿರಾಜ ಮಾರ್ಗದಲ್ಲಿ, ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣತ ಮತಿಗಳ್ ಎಂದಿರುವುದು ಈ ಜನಪದರನ್ನ ಎಂದು ನೆನಪಿಸಿದರು. ಕಾರ್ಯಕ್ರಮ ದ ಉದ್ಘಾಟನೆಯನ್ನು ತಾಲ್ಲೂಕು ಜಾನಪದ ಪರಿಷತ್ ನ ಅಧ್ಯಕ್ಷರಾದ ಶ್ರೀ ಎಂ, ಎಂ, ಪರಮೇಶ್ ತಮಡಿ ಬಾರಿಸುವುದರ ಮೂಲಕ ನೆರವೇರಿಸಿದರು. ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಇದರ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ತ. ಮ. ನರಸಿಂಹ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಉಮೇಶ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಈ ರೀತಿಯ ಕಾರ್ಯಕ್ರಮ ನೆಡೆಯುವುದು ಸಂತಸ ತಂದಿದೆ. ಜನಪದರು ವಿಶ್ವದ ಎಲ್ಲಾ ಸಾಹಿತ್ಯದ ಹರಿಕಾರರು ಎಂದರು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಶ್ರೀ ಗಣೇಶ್ ಮೂರ್ತಿ ನಾಗರಕೊಡಿಗೆ, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಶ್ರೀ ರಾಘವೇಂದ್ರ ನಗರ, ಜಾನಪದ ಪರಿಷತ್ತು ಇದರ ಕಾರ್ಯದರ್ಶಿ ಶ್ರೀ ವಿಜೇಂದ್ರ ಶೇಟ್,ಸುರೇಶ್ ಕುಮಾರ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು...
HOSANAGARA NEWS...
