
ಹೊಸನಗರ: ಹಿಂದು ಧಾರ್ಮಿಕ ಪವಿತ್ರ ಕ್ಷೇತ್ರವಾದ ಧರ್ಮಸ್ಥಳದ ಮೇಲೆ ಅಪಪ್ರಚಾರ ಮಾಡುವ ಮೂಲಕ ಅಲ್ಲಿನ ದಾರ್ಮಿಕ ನಂಬಿಕೆಯನ್ನು ಬುಡಮೇಲು ಮಾಡುವ ಕೆಲಸವನ್ನು ಮತಾಂದ ಶಕ್ತಿಗಳು ಮಾಡುತ್ತಿದ್ದಾರೆ ಎಂದು ವಾಗ್ಮಿ ಆದರ್ಶ್ ಗೋಖಲೆ ತಿಳಿಸಿದರು.
ಧರ್ಮಸ್ಥಳ ಭಕ್ತಾದಿಗಳ ವೇದಿಕೆ ಹೊಸನಗರ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಮೆರವಣಿಗೆ ಹಾಗೂ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆದರ್ಶ ಗೋಖಲೆ
ಹಿಂದೂ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ, ಕಳಂಕ ತರುವ ಕೆಲಸ, ಷಡ್ಯಂತರ ನಿರಂತರವಾಗಿ ಮಾಡುತ್ತಲೇ ಇದ್ದಾರೆ ಅಂತವರನ್ನು ಗಲ್ಲಿಗೇರಿಸಿದರೂ ತಪ್ಪಿಲ್ಲ ಹಿಂದುಗಳ ಪವಿತ್ರ ಧಾರ್ಮಿಕ ಕ್ಷೇತ್ರದ ಬಗ್ಗೆ ಈ ರೀತಿಯಾದ ಅಪಪ್ರಚಾರ ಕಂಡನೀಯವಾದುದ್ದು ಅದನ್ನು ಹಿಂದುಗಳಾದ ನಾವೆಲ್ಲರೂ ಒಕ್ಕೊರಳಿನಿಂದ ವಿರೋಧಿಸಬೇಕು ಎಂದರು.
ಕ್ಷೇತ್ರದ ಬಗ್ಗೆ ಯಾರೇ ಏನೇ ಅಪಪ್ರಚಾರವನ್ನು ಮಾಡಿದರು ಕ್ಷೇತ್ರಕ್ಕಾಗಲಿ ವೀರೇಂದ್ರ ಹೆಗ್ಗಡೆಯವರಿಗಾಗಲಿ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಇದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಗಾಸಿಯಾಗುತ್ತದೆ ಅಷ್ಟೇ ಅಪಪ್ರಚಾರ ಮಾಡುತ್ತಿರುವ ದುಷ್ಟರಿಗೆ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪಸ್ವಾಮಿ ಬುದ್ಧಿಯನ್ನ ಕಲಿಸಲಿದ್ದಾನೆ ಹಾಗೆಯೇ ನಮ್ಮ ಧಾರ್ಮಿಕ ಕೇಂದ್ರಗಳ ಬಗ್ಗೆ ಈ ರೀತಿಯ ಅಪಪ್ರಚಾರಗಳು ನಡೆದದ್ದೇ ನಾವೆಲ್ಲರೂ ಒಟ್ಟಾಗಿ ಅದನ್ನ ವಿರೋಧಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಸಬೆಯ ಕಾರ್ಯಕ್ರಮ ಆರಂಭಕ್ಕೂ ಮೊದಲು ಮಾವಿನಕಾಯಿ ಕೊಪ್ಪದ ಗಂಗಾಧರೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಭಕ್ತರು ಮೆರವಣಿಗೆಯಲ್ಲಿ ತೆರಳಿ ಧರ್ಮಸ್ಥಳ ದೇವಸ್ಥಾನ ಹಾಗೂ ಅಲ್ಲಿ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಸ್ ನಿಲ್ದಾಣದ ಆಯೋಜಿಸಲಾಗಿದೆ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಪ್ರಮುಖರಾದ ಎನ್.ಆರ್ ದೇವಾನಂದ್, ಜೆಡಿಎಸ್ ತಾಲೂಕು ಅಧ್ಯಕ್ಷ ವರ್ತೇಶ್, ಪಟ್ಟಣ ಪಂಚಾಯತಿ ಅಧ್ಯಕ್ಷ ನಾಗಪ್ಪ, ಸುಧೀಂದ್ರ ಪಂಡಿತ್, ಮೋಹನ್ ಶೆಟ್ಟಿ, ನಾರಾಯಣ ಕಾಮತ್, ವರ್ತಕರ ಸಂಘದ ಅಧ್ಯಕ್ಷ ವಿಜೇಂದ್ರ ಶೇಟ್, ಕೃಷ್ಣವೇಣಿ, ಹಾಲಗದ್ದೆ ಉಮೇಶ್, ಎನ್ ಶ್ರೀಧರ ಉಡುಪ, ನೇತ್ರಾ ಸುಬ್ರಾಯಭಟ್, ಎನ್ ಗಣೇಶ್, ಪ್ರವೀಣ್, ಸುರೇಶ ಸ್ವಾಮಿರಾವ್, ಆಲವಳ್ಳಿ ವೀರೇಶ್, ದೇವರಾಜ್, ಮಂಡಾನಿ ಮೋಹನ್, ಈಶ್ವರಪ್ಪ ಗೌಡ, ಮಿಲ್ ಈಶ್ವರಪ್ಪ ಗೌಡ, ಹೆಚ್ ಮಹಾಬಲ, ಗೌತಮ್ ಮುರುಳಿಧರ ಹತ್ವಾರ್, ಗೌತಮ್, ಕಟ್ಟೆ ಸುರೇಶ, ರಾಮಚಂದ್ರ ಹೆಗ್ಗಡೆ, ಸದಾಶಿವ ಶ್ರೇಷ್ಠಿ, ಎರಗಿ ಉಮೇಶ್, ಬಿ.ಜಿ ನಾಗರಾಜ್, ಎಂ.ಪಿ ಸುರೇಶ್, ಉಮೇಶ್ ಕಂಚುಗಾರ್, ಗಣಪತಿ ಪಂಡಿತ್, ಆರ್.ಟಿ ಗೋಪಾಲ್, ಸುಮತಿ ಪೂಜಾರಿ, ಆಟೋ ಚಾಲಕರ ಸಂಘದ ಸದಸ್ಯರು, ಇನ್ನೂ ಮುಂತಾದವರು ಉಪಸ್ಥಿತರಿದ್ದರು..
HOSANAGARA NEWS..
Discover more from Prasarana news
Subscribe to get the latest posts sent to your email.
