
ಹೊಸನಗರ: ಮಳೆಯ ಪ್ರಮಾಣವನ್ನು ಸಮರ್ಪಕವಾಗಿ ಮಾಪನ ಮಾಡದೆ ರೈತರಿಗೆ ಬೆಳೆ ವಿಮೆ ಪರಿಹಾರದಲ್ಲಿ ವಂಚಿಸಿರುವ ಬೆಳೆ ವಿಮೆ ಕಂಪನಿಯನ್ನ ಕಪ್ಪು ಪೆಟ್ಟಿಗೆ ಸೇರಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಹವಮಾನಧಾರಿತ ಬೆಳೆ ವಿಮೆ ಸೌಲಭ್ಯವನ್ನು ರೈತರಿಗೆ ನೀಡುವ ವಿಷಯದಲ್ಲಿ ಬೆಳೆ ವಿಮೆ ಕಂಪನಿ ಸರಿಯಾದ ರೀತಿಯಲ್ಲಿ ಕೆಲಸವನ್ನು ನಿರ್ವಹಿಸದೆ ರೈತರಿಗೆ ವಂಚಿಸಿದ್ದು ಕೂಡಲೇ ಆ ಕಂಪನಿಯನ್ನ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ತಿಳಿಸಿದರು.
ಅಲ್ಲದೆ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನಿನ ಆದೇಶ ಹೊರತಾಗಿ ರೈತರಿಗೆ ಅನಾವಶ್ಯಕವಾಗಿ ನೋಟಿಸ್ ನೀಡುವುದನ್ನ ನಿಲ್ಲಿಸಬೇಕು ವಿನಾಕಾರಣ ರೈತರಿಗೆ ತೊಂದರೆಯನ್ನು ಕೊಡಬಾರದು ಎಂದು ಕಟ್ಟುನಿಟ್ಟಾಗಿ ಆದೇಶಿಸಿದರು ಅಲ್ಲದೆ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಪರೀಕ್ಷೆಗಳು ಆರಂಭವಾಗಲಿದ್ದು ತಾಲೂಕಿನಲ್ಲಿಡೆ ವಿದ್ಯುತ್ ಸಮಸ್ಯೆ ಆಗದಂತೆ ನೋಡಿಕೊಳ್ಳುವ ಜೊತೆಗೆ ಸಮಸ್ಯೆ ಆದಂತಹ ಸಂದರ್ಭದಲ್ಲಿ ಶೀಘ್ರ ಪರಿಹಾರವನ್ನು ಕಂಡುಕೊಳ್ಳುವಂತೆ ತಿಳಿಸಿದರು ಜೊತೆಗೆ ತಾಲೂಕಿನಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಿದ್ದು ಅದಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಹಾಗೂ ಔಷಧಿಗಳನ್ನ ಸೂಕ್ತ ಸಮಯದಲ್ಲಿ ನೀಡುವಂತೆ ಹಾಗೂ ಮಂಗನ ಕಾಯಿಲೆ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಮಾತನಾಡಿದ ತೀರ್ಥಹಳ್ಳಿ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಅರಗ ಜ್ಞಾನೇಂದ್ರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಆಡಳಿತ ಅಧಿಕಾರಿಯನ್ನು ನೇಮಿಸಿದ್ದು ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು ಜೊತೆಗೆ ನಿಯೋಜಿತ ಸ್ಥಳದಲ್ಲಿ ಇದ್ದು ಕಾರ್ಯನಿರ್ವಹಿಸುವಂತೆ ಸೂಚಿಸಿದರು ಹಾಗೆ ಜೆಜೆಎಮ್ ಮತ್ತು ಬಹುಗ್ರಾಂ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಬಹಳಷ್ಟು ವಿಳಂಬವಾಗುತ್ತಿದ್ದು ನಿಗದಿತ ಅವಧಿಯ ಒಳಗೆ ಕಾಮಗಾರಿಯನ್ನು ಮುಗಿಸದ ಗುತ್ತಿಗೆದಾರನಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಭೆಯಲ್ಲಿ ತಾಲೂಕು ಪಂಚಾಯತ್ ಆಡಳಿಾಧಿಕಾರಿ ಅನ್ನಪೂರ್ಣ , ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನರೇಂದ್ರ ಕುಮಾರ್ ಕೆಡಿಪಿ ಸಮಿತಿಯ ಸದಸ್ಯರಾದ, ಸುಮ ಸುಬ್ರಹ್ಮಣ್ಯ
ಎಂ ಎಂ ಪರಮೇಶ್ವರ್, ಆಸಿಫ್, ಚಂದ್ರೇಶ್, ನಾಗೇಂದ್ರ, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು...
KDP MEETING..
Discover more from Prasarana news
Subscribe to get the latest posts sent to your email.
