GOPALKRISHNA BELUR:ಶ್ರೀ ಗೋಪಾಲಕೃಷ್ಣ ಬೇಳೂರು ಹುಟ್ಟುಹಬ್ಬದ ವಿಜೃಂಭಣೆ:ಅರ್ಜುನ್ ಜನ್ಯ ಸಾರಥ್ಯದಲ್ಲಿ ಸಂಗೀತ ಸಂಜೆ ಸೇರಿದಂತೆ ನಾಳೆ ವಿವಿಧ ವಿಶೇಷ ಕಾರ್ಯಕ್ರಮಗಳು….

ಹೊಸನಗರ: ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಗೋಪಾಲಕೃಷ್ಣ ಬೇಳೂರು ಅವರ ಹುಟ್ಟುಹಬ್ಬವನ್ನಾ ವಿಜೃಂಭಣೆ ಇಂದ ಅದ್ದೂರಿಯಾಗಿ  ಆಚರಿಸಲಿದ್ದು ಅರ್ಜುನ್ ಜನ್ಯ ಸಾರಥ್ಯದಲ್ಲಿ ಸಂಗೀತ ಸಂಜೆ ಸೇರಿದಂತೆ ವಿವಿಧ ವಿಶೇಷ ಕಾರ್ಯಕ್ರಮಗಳನ್ನ ನಾಳೆ ಹಮ್ಮಿ ಕೊಳ್ಳಲಾಗಿದೆ ಎಂದು ಬೇಳೂರು ಗೋಪಾಲಕೃಷ್ಣ ಹುಟ್ಟುಹಬ್ಬ ಆಚರಣ ಸಮಿತಿಯ ಅಧ್ಯಕ್ಷರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ತಿಳಿಸಿದರು.
ಕುರಿತಾಗಿ ಹೊಸನಗರ ನೆಹರು ಮೈದಾನದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು  ಕ್ಷೇತ್ರದ ಜನಪ್ರಿಯ ಶಾಸಕರ ಹುಟ್ಟು ಹಬ್ಬವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಅವರ ಅಭಿಮಾನಿಗಳು ಹಿತೈಷಿಗಳು ಕಾರ್ಯಕರ್ತರು ಈ ಒಂದು ಆಚರಣೆಯನ್ನು ಹಮ್ಮಿಕೊಂಡಿದ್ದು ನಾಳೆ ಬೆಳಿಗ್ಗೆ ಇಂದಲೇ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲಾ ಮಕ್ಕಳಿಗೆ ಸಿಹಿ ಹಂಚುವುದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಹಿಳಾ ಸಂಘಟನೆಗಳಿಂದ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮೂಲಕ ಕಾರ್ಯಕ್ರಮವನ್ನು ಆರಂಭಗೊಳಿಸಲಿದ್ದು ಸಂಜೆ 6 ಗಂಟೆಗೆ ಹುಟ್ಟು ಹಬ್ಬದ  ಅಂಗವಾಗಿ  ಸುಪ್ರಸಿದ್ಧ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಾರಥ್ಯದಲ್ಲಿ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಈ ಕಾರ್ಯಕ್ರಮದಲ್ಲಿ ನಟಿ-ನಿರೂಪಕಿ ಅನುಶ್ರೀ ಅವರು ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಲ್ಲದೆ ಪ್ರಸಿದ್ಧ ಚಿತ್ರನಟರಾದ ಲೂಸ್ ಮಾದ ಖ್ಯಾತಿಯ ಯೋಗಿ, ರವಿಶಂಕರ್ ಮತ್ತು ವಿರಾಟ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು   ವೇದಿಕೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಕಾರ್ಮಿಕ ಸಚಿವರಾದ ಸಂತೋಷ್ ಲಾಡ್, ಕಿಮ್ಮನೆ ರತ್ನಾಕರ್, ಆರ್ ಎಂ ಮಂಜುನಾಥ್ ಗೌಡ, ಪ್ರಸನ್ನ ಕುಮಾರ್, ಇನ್ನು ಮುಂತಾದ ಜಿಲ್ಲೆಯ ಪ್ರಮುಖ ನಾಯಕರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪನವರು ಸೇರಿ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದವರನ್ನು ಸನ್ಮಾನ ಕಾರ್ಯಕ್ರಮ ನೆರವೇರಲಿದೆ.
ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಶ್ರೀ ಬೇಳೂರು ಅವರ ಸೇವೆ ಮತ್ತು ನಾಯಕತ್ವವನ್ನು ಗೌರವಿಸಲು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಜೊತೆಗೆ ಕ್ಷೇತ್ರದ ಮುಂದಿನ ಅಭಿವೃದ್ಧಿಯ ಚಿತ್ರಣವನ್ನು ಶಾಸಕರ ಮೂಲಕವಾಗಿ ಸಾರ್ವಜನಿಕ ಮುಂದಿಡುವ ಉದ್ದೇಶ ನಮ್ಮದಾಗಿದ್ದು ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿ ಕಾರ್ಯಕ್ರಮವನ್ನ ಯಶಸ್ವಿಗೊಳಿಸಬೇಕು ಎಂದು ಸಮಿತಿ ಪರವಾಗಿ ಕೋರಿದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಕಲಗೋಡು ರತ್ನಾಕರ್, ವಿದ್ಯಾಧರ್ ಗುರುಶಕ್ತಿ, ಚಂದ್ರ ಮೌಳಿ ಬಿಜಿ, ಮಂಜು ಸಣ್ಣಕ್ಕಿ, ಎಂಪಿ ಸುರೇಶ್, ಸತೀಶ್ ಬಾವಿಕಟ್ಟೆ, ಬಸವರಾಜ್ ಗಗ್ಗ, ಉಬೇದ್, ಮಹೇಂದ್ರ, ಮಂಜುನಾಥ್ ಡಿ ಆರ್, ಸುದೀಪ್,ನಾಸಿರ್ ಮುಂತಾದವರು ಮುಂತಾದವರು ಉಪಸ್ಥಿತರಿದ್ದರು..

GOPALKRISHNA BELUR


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading