
ಹೊಸನಗರ: ಸವಾರನ ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದು ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿ ಬಳಿ ಶನಿವಾರ ಸಂಜೆ ಸಂಭವಿಸಿದೆ.
ಸೊನಲೆಯ ವಾಸಿ ನಾಗರಾಜ್ ಎಂಬುವರ ಪುತ್ರ ಸುಮಂತ್ (30) ಸಾವನ್ನಪ್ಪಿದ ಯುವಕನಾಗಿದ್ದಾರೆ. ಸೊನಲೆಯಿಂದ ಹೊಸನಗರದ ಕಡೆಗೆ ಬರುತ್ತಿದ್ದ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಧರೆಗೆ ಅಪ್ಪಳಿಸಿ ಈ ಘಟನೆ ನಡೆದಿದೆ.
ಸುಮಂತ್, ನಾಗರಾಜ್ ಅವರ ಏಕಮಾತ್ರ ಪುತ್ರನಾಗಿದ್ದು ಈತ ಅವಿವಾಹಿತನಾಗಿದ್ದ ಎಂದು ತಿಳಿದುಬಂದಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...
ACCIDENT:DEATH
Discover more from Prasarana news
Subscribe to get the latest posts sent to your email.
