NOMINATING MEMBER:ನಾಯಕತ್ವ ಗುಣ ಬೆಳೆಸಿಕೊಳ್ಳಲು ಇದು ಉತ್ತಮ ಅವಕಾಶ: “ಬೇಳೂರು ಗೋಪಾಲಕೃಷ್ಣ”

ಹೊಸನಗರ: ನಾಮನಿರ್ದೇಶಕ ಸದಸ್ಯರಾಗಿ ನೇಮಕಗೊಂಡ ಎಲ್ಲಾ ಸದಸ್ಯರಿಗೆ ಜನಪರವಾದಂತಹ ಕೆಲಸವನ್ನು ಮಾಡುವ ಮೂಲಕ ನಾಯಕತ್ವ ಗುಣವನ್ನು ಬಳಸಿಕೊಳ್ಳಲು ಇದು ಉತ್ತಮ ಅವಕಾಶ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ನಾಮನಿರ್ದೇಶಿತ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಾಮ ನಿರ್ದೇಶನಗೊಂಡ ಬಳಿಕ ಆ ಸಮಿತಿಯಲ್ಲಿ ತಮ್ಮ ಪಾತ್ರವೇನು ಎನ್ನುವುದನ್ನು ಅರಿತು ಕಾರ್ಯನಿರ್ವಹಿಸಬೇಕು. ಕಾಲೇಜು, ಆಸ್ಪತ್ರೆ, ಆಶ್ರಯ, ಬಗರ್‌ಹುಕುಂ, ನಂತಹ ಸಮಿತಿಗಳ ಸದಸ್ಯರ ಜವಾಬ್ದಾರಿ ಸಾಕಷ್ಟಿದೆ. ಅಧಿಕಾರಿ ವರ್ಗದಿಂದ ತ್ವರಿತಗತಿಯಲ್ಲಿ ಕಾರ್ಯಗಳು ಆಗಬೇಕು ಹಾಗೂ ಯೋಜನೆಗಳ ಲಾಭ ಅರ್ಹರಿಗೆ ದೊರೆಯಬೇಕು. ಅಲ್ಲಿನ ಕುಂದು ಕೊರತೆಗಳ ಮಾಹಿತಿ ಕೆಲೆ ಹಾಕಿ ಸಭೆಯಲ್ಲಿ ಗಮನಕ್ಕೆ ತರಬೇಕು.

ಎಲ್ಲವನ್ನೂ ಶಾಸಕರೇ ಪ್ರತಿನಿತ್ಯ ಗಮನಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬ ಸದಸ್ಯರು ತಮ್ಮ ಹೊಣೆಗಾರಿಕೆ ಅರಿತು ಕಾರ್ಯ ನಿರ್ವಹಿಸಬೇಕು, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಲು ಸಹಾ ಇದು ಸಹಕಾರಿ ಆಗಲಿದೆ ಎನ್ನುವುದನ್ನು ಮರೆಯಬಾರದು ಎಂದರು, ಸಕ್ರಿಯರಾಗಿಲ್ಲದ ಸದಸ್ಯರನ್ನು ಬದಲಾಯಿಸುವ ಮೂಲಕ ಸಕ್ರಿಯರಾಗಿ ಕಾರ್ಯ ನಿರ್ವಹಿಸುವವರಿಗೆ ಅವಕಾಶವನ್ನು ಕೊಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹೊಸನಗರ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮೌಳಿ
ನಾಮ ನಿರ್ದೇಶನ ಗೊಂಡ ಕೆಲವರನ್ನ ಹೊರತುಪಡಿಸಿ ಉಳಿದಂತೆ ಅಧಿಕಾರಕ್ಕಾಗಿ ಆಯ್ಕೆಯಾದಂತೆ ಕಾಣುತ್ತಿದ್ದು ಕೆಲವು ನಾಮ ನಿರ್ದೇಶಕರು ಸರ್ಕಾರಿ ಕಛೇರಿಗಳ ಅಧಿಕಾರಿಗಳಿಗೆ ಹೆದರಿಸುವ ತಂತ್ರ ನಡೆಸುತ್ತಿದ್ದಾರೆ ಎಂದು ನಮ್ಮ ಗಮನಕ್ಕೆ ಈಗಾಗಲೇ ಬಂದಿದ್ದು ನೀವು ಈ ರೀತಿ ಮಾಡುವುದರಿಂದ ನಮ್ಮ ಜನಪ್ರಿಯ ಶಾಸಕ ಬೇಳೂರು ಗೋಪಾಲಕೃಷ್ಣರವರಿಗೆ  ಅವಮಾನವಾಗುತ್ತಿದೆ. ಮುಂದೆಯೂ ಇವರೆ ಶಾಸಕರಾಗಬೇಕಾದರೆ ನೀವೆಲ್ಲರೂ ಒಗ್ಗಟಿನಿಂದ ಸರ್ಕಾರದ ಎಲ್ಲ ಯೋಜನೆಗಳನ್ನು ಗ್ರಾಮಸ್ಥರಿಗೆ ತಲುಪಿಸುವಂತೆ ಕೆಲಸ ಮಾಡಬೇಕೆಂದರು. ಈ ಸಂದರ್ಭದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮತಿ ಅಧ್ಯಕ್ಷ ಎಚ್.ಬಿ.ಚಿದಂಬರ್, ಶಾಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಸುಮಾ ಸುಬ್ರಹ್ಮಣ್ಯ, ಸದಾಶಿವ ಶ್ರೇಷ್ಠಿ, ಗುರುರಾಜ್ ಹೆಚ್.ಕೆ, ಜ್ಯೋತಿ ಚಂದ್ರಮೌಳಿ  ಉಪಸ್ಥಿತರಿದ್ದರು..

NOMINATING MEMBER.


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading

Subscribe