PRIVATE BUS:ಹುಲಿಕಲ್ ಘಾಟಿ ಸಮೀಪ ಹೊತ್ತಿ ಉರಿದ ಖಾಸಗಿ ಬಸ್…

ಹೊಸನಗರ: ತಾಲೂಕಿನ ಹುಲಿಕಲ್ ಘಾಟಿ ಸಮೀಪ ಖಾಸಗಿ ಬಸ್ಸ ಒಂದು ತಾಂತ್ರಿಕ ದೋಷದಿಂದ ಹೊತ್ತಿ ಉರಿದ ಸಂಪೂರ್ಣ ಸುಟ್ಟು ಹೋದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಸಾಗರ ಹೊಸನಗರ ಮಾರ್ಗವಾಗಿ ಉಡುಪಿಗೆ ತೆರಳುತ್ತಿದ್ದ ಖಾಸಗಿ ಬಸ್ ಹುಲಿಕಲ್ ಘಾಟಿ ಸಮೀಪ ತಾಂತ್ರಿಕ ದೋಷದಿಂದ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ.
ಹುಲಿಕಲ್ ಘಾಟಿ ರಸ್ತೆ ಕಾಮಗಾರಿ ಹಿನ್ನೆಲೆ ಸಾಗರದಿಂದ ಹೊಸನಗರ ಮಾರ್ಗವಾಗಿ ಹೊರಟ ಬಸ್ ಹುಲಿಕಲ್ ಘಾಟಿ ದೇವಸ್ಥಾನ ಸಮೀಪ ಪ್ರಯಾಣಿಕರನ್ನು ಅದೇ ಸಂಸ್ಥೆಯ ಇನ್ನೊಂದು ಬಸ್ಸಿಗೆ ಬದಲಾಯಿಸಿ ಅಲ್ಲಿಂದ ಉಡುಪಿಯ ಕಡೆಗೆ ತೆರಳುವ ವೇಳೆ ಹುಲಿಕಲ್ ಘಾಟಿಯಲ್ಲಿ  ಘಟನೆ ಸಂಭವಿಸಿದೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಇನ್ನಷ್ಟು ಮಾಹಿತಿ ಬರಬೇಕಿದ್ದು ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

PRIVATE BUS..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading