NETWORK PROBLEM:ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಪಾದಯಾತ್ರೆಗೆ ಸಜ್ಜಾದ ವಾರಂಬಳ್ಳಿ ಗ್ರಾಮಸ್ಥರು…

ಹೊಸನಗರ: ಕಳೆದ ಎಂಟು ವರ್ಷಗಳಿಂದ ಮೊಬೈಲ್ ನೆಟ್ವರ್ಕ್ ಸಮಸ್ಯೆ ಸರಿಪಡಿಸುವಂತೆ ವಾರಂಬಳ್ಳಿ ಗ್ರಾಮಸ್ಥರು ಪ್ರಧಾನ ಮಂತ್ರಿ ಗಳಿಗೆ ಪತ್ರ ಬರೆಯುವುದರಿಂದ ಹಿಡಿದು ಎಲ್ಲಾ ರೀತಿಯ ಪ್ರಯತ್ನವನ್ನು ಮಾಡಿದ್ದಾರೆ ಆದರೆ ಈವರೆಗೂ ಅವರಿಗೆ ಕೇವಲ ಆಶ್ವಾಸನೆ ಅಷ್ಟೇ ದೊರೆತದ್ದು.
ಹೊಸನಗರ ತಾಲೂಕಿನ ವಾರಂಬಳ್ಳಿ ಎಂಬ ಗ್ರಾಮದ ಜನರು ಮೊಬೈಲ್ ನೆಟ್ವರ್ಕ್ ಸಮಸ್ಯೆ ಸರಿಪಡಿಸುವಂತೆ ಕಳೆದ ಎಂಟು ವರ್ಷಗಳಿಂದ ನಿರಂತರ ಹೋರಾಟವನ್ನು ಮಾಡುತ್ತಾ ಬಂದಿದ್ದಾರೆ ಆದರೆ ಪ್ರತಿ ಬಾರಿ ಕೇವಲ ನಿಮ್ಮ ಸಮಸ್ಯೆಯನ್ನು ಶೀಘ್ರ ಪರಿಹರಿಸುತ್ತೇವೆ ಎಂಬ ಆಶ್ವಾಸನೆ ಅಷ್ಟೇ ಅವರಿಗೆ ಸಿಕ್ಕಿದ್ದು ಸಮಸ್ಯೆ ಇವರೆಗೂ ಪರಿಹಾರವಾಗಿಲ್ಲ.
ಪ್ರಧಾನ ಮಂತ್ರಿ, ಜಿಲ್ಲಾಧಿಕಾರಿ, ಸಂಸದರು, ಸಚಿವರು, ಶಾಸಕರು, ಸಂಬಂಧಪಟ್ಟ ಇಲಾಖೆ ಹೀಗೆ ಎಲ್ಲರ ಗಮನಕ್ಕೂ ಅಲ್ಲಿನ ನೆಟ್ವರ್ಕ್ ಸಮಸ್ಯೆ ಕುರಿತು ಪತ್ರ ಮೂಲಕ ತಿಳಿಸಲಾಗಿದೆ ಆದರೂ ಸಹ ಈವರೆಗೂ ಆ ಗ್ರಾಮದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ವ್ಯವಹಾರಸ್ತರಿಗೆ, ಅನುಕೂಲವಾಗುವ ದೃಷ್ಟಿಯಿಂದ ನೆಟ್ವರ್ಕ್ ಸಮಸ್ಯೆಯನ್ನ ಸರಿಪಡಿಸುವ ಗೋಜಿಗೆ ಯಾರು ಬಾರದೆ ಇರುವುದು ವಿಪರ್ಯಾಸ ವೆ ಸರಿ
ಇಷ್ಟೆಲ್ಲ ಪ್ರಯತ್ನಗಳಿಂದ ಬೇಸತ್ತ ಗ್ರಾಮಸ್ಥರು ಇದೇ ತಿಂಗಳ 17ನೇ ತಾರೀಕಿನಂದು  ವಾರಂಬಳ್ಳಿಯ ಕಲ್ಯಾಣಿೇಶ್ವರ ದೇವಸ್ಥಾನದಿಂದ ಹೊಸನಗರ ತಾಲೂಕು ಕಚೇರಿಯವರಗೆ "ನೆಟ್ಟಗಿಲ್ಲದ ನೆಟ್ವರ್ಕ್ ಗಾಗಿ ನಮ್ಮ ನಡಿಗೆ" ಎಂಬ ಘೋಷವಾಕ್ಯದೊಂದಿಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದು ಇದರ ನಂತರವು ಸಮಸ್ಯೆ ಬಗೆಹರಿಯದಿದ್ದಲ್ಲಿ ಇನ್ನೂ ತೀವ್ರ ಸ್ವರೂಪದ ಹೋರಾಟಕ್ಕೆ ಗ್ರಾಮಸ್ತರು ನಿರ್ಧರಿಸಿದೇವೆ ಎಂದು ನೆಟ್ವರ್ಕ್ ಹೋರಾಟ ಸಮಿತಿ ವಾರಂಬಳ್ಳಿ ತಿಳಿಸಿದೆ....

NETWORK PROBLEM...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading