
ಹೊಸನಗರ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾರಥ್ಯದ ನೂತನ ಸಚಿವ ಸಂಪುಟದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರ್ ಗೆ ಸಚಿವ ಸ್ಥಾನ ನೀಡುವುದರ ಮೂಲಕ ಕ್ರಿಯಾಶೀಲ ಶಾಸಕರಿಗೆ ಆದ್ಯತೆ ನೀಡಬೇಕು ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಆಗ್ರಹಿಸಿದೆ.
ಪಟ್ಟಣದ ಗಾಂಧಿ ಮಂದಿರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿಜಿ ಚಂದ್ರಮೌಳಿ, ಗೋಪಾಲಕೃಷ್ಣ ಬೇಳೂರು ಅವರು ಸರ್ವ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ ಸಮನ್ವಯ ಸ್ವಭಾವದವರಾಗಿದ್ದಾರೆ. ಸಚಿವ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದರು ಅಲ್ಲದೆ ಅವರಿಗೆ ಸಚಿವ ಸ್ಥಾನವನ್ನು ನೀಡುವುದರಿಂದ ಮುಳುಗಡೆ ಪ್ರದೇಶವಾದ ಈ ಕ್ಷೇತ್ರ ಇನ್ನಷ್ಟು ಅಭಿವೃದ್ಧಿಯನ್ನು ಕಾಣಲಿದೆ ಗೋಪಾಲಕೃಷ್ಣ ಬೇಳೂರು ಅವರು ಜಿಲ್ಲೆಯ ಜಾತ್ಯಾತೀತ ನಾಯಕರಾಗಿದ್ದು ಅವರಿಗೆ ಸಚಿವ ಸ್ಥಾನ ನೀಡುವುದರಿಂದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಇನ್ನಷ್ಟು ಬಲಿಷ್ಠ ವಾಗಲಿದೆ ಎಂದರು.
ಬಳಿಕ ಮಾತನಾಡಿದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುಮಾ ಸುಬ್ರಹ್ಮಣ್ಯ ಮೂರು ಬಾರಿ ಶಾಸಕರಾಗಿರುವ ಅವರು ಪಕ್ಷ ಯಾವುದೇ ಖಾತೆಯನ್ನು ನೀಡಿದರು ಸಹ ಅದನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರು ಎಂದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಿದಂಬರ ಹೂವಿನ ಕೋಣೆ ಮಾತನಾಡಿ ಈಗಾಗಲೇ ಇಲ್ಲಿನ ಜನಪ್ರಿಯ ಶಾಸಕರು ತಮಗೆ ನೀಡಿರುವಂತಹ ಅರಣ್ಯ ಅಭಿವೃದ್ಧಿ ಕೈಗಾರಿಕಾ ನಿಗಮವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಅದನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಈ ನಿಟ್ಟಿನಲ್ಲಿ ಸಚಿವ ಸ್ಥಾನವನ್ನು ಅವರು ಸೂಕ್ತವಾದ ವ್ಯಕ್ತಿಯಾಗಿದ್ದು ಈ ಬಾರಿಯ ಸಚಿವ ಸಂಪುಟದಲ್ಲಿ ಅವರಿಗೆ ಅವಕಾಶವನ್ನು ನೀಡಬೇಕಾಗಿ ಆಗ್ರಹಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಯಶೀಲಪ್ಪಗೌಡ, ಪ್ರಭಾಕರ್ ರಾವ್, ಏರಗಿ ಉಮೇಶ್, ಸದಾಶಿವ ಶೆಟ್ಟಿ, ಗುರುರಾಜ್, ಎಂಪಿ ಸುರೇಶ್, ವಿನಯ್ ಕುಮಾರ ದುಮ್ಮ, ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ, ಗೋಪಿನಾಥ್, ಗುರು ಜಯನಗರ ಮುಂತಾದವರು ಉಪಸ್ಥಿತರಿದ್ದರು.
MINISTER..
Discover more from Prasarana news
Subscribe to get the latest posts sent to your email.
