NEET:ನೀಟ್ ಪ್ರತಿಭಟನೆ ನೆಪದಲ್ಲಿ ಹಿಂದು ವಿರೋಧಿ ದೇಶ ವಿರೋಧಿ ಹೇಳಿಕೆ..

ಹೊಸನಗರ:ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕೆಲ ಪ್ರತಿಭಟನಾಕಾರರು ಹಿಂದೂ ಧರ್ಮ ಹಾಗೂ ದೇಶದ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಅವರ ವಿರುದ್ಧ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ವಿವಿಧ ಹಿಂದೂ ಸಂಘಟನೆಗಳು ಇಂದು ಪ್ರತಿಭಟನೆಯನ್ನು ನಡೆಸಿದವು.
ಈ ಕುರಿತಂತೆ ಹೊಸನಗರ ಖಾಸಗಿ ಬಸ್ ನಿಲ್ದಾಣದಿಂದ ತಾಲೂಕು ಕಚೇರಿ ವರೆಗೆ  ಮೆರವಣಿಗೆ ಮೂಲಕ ತೆರಳಿದ ಹಿಂದೂ ಸಂಘಟನೆ ಕಾರ್ಯಕರ್ತರು ತಪ್ಪಿತಸ್ಥ ರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ  ತಾಲೂಕು ದಂಡಾಧಿಕಾರಿಗಳಿಗೆ ಮನವಿಯನ್ನ ಮಾಡಿದರು.
ಮನವಿ ಪತ್ರದಲ್ಲಿ ಈ ಹಿಂದೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಅಕ್ರಮ ಕುರಿತಂತೆ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಕೆಲ ಪ್ರತಿಭಟನಾಕಾರರು ದೇಶ ವಿರೋಧಿ ಹಿಂದೂ ವಿರೋಧಿ ಹಾಗೂ ಶ್ರೀರಾಮನನ್ನು ಅವಹೇಳನ ಮಾಡುವ ಜೊತೆಗೆ ಸೈನಿಕರ ಕುರಿತಾಗಿ ಅವಹೇಳನಕಾರಿ ಹೇಳಿಕೆಯನ್ನು ನೀಡುತ್ತಿದ್ದು ಅವರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು ಈ ಸಂದರ್ಭದಲ್ಲಿ ಹಿಂದು ಸಂಘಟನೆಯ ಪ್ರಮುಖರಾದ ಸುಧೀಂದ್ರ ಪಂಡಿತ್, ಧನ್ಯಶ್ರೀ ರಮೇಶ್, ಎಂ.ಏನ್. ಸುಧಾಕರ್, ಗಣಪತಿ ಬೆಳಗೋಡು,ಎನ್.ಆರ್. ದೇವಾನಂದ್, ಶ್ರೀಪತಿ ರಾವ್, ಅನೂಪ್ ಅರವಿಂದ್, , ಪ್ರಶಾಂತ್ ಆಟೋ, , ಕೆ.ವಿ. ವಿನಯ್,  ರಾಘವೇಂದ್ರ ಕಲ್ಕೊಪ್ಪ, ಮಂಜುನಾಥ್ ಸಂಜೀವ, ರಾಜು, ಉಮೇಶ್ ಪಾಲ್ಗೊಂಡಿದ್ದರು.

NEET..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading