
ಹೊಸನಗರ: ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಸಾಧ್ಯ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಅವರನ್ನು ಸಮಾಜದ ಆಸ್ತಿಯನ್ನಾಗಿ ರೂಪಿಸಬೇಕು ಎಂದು ತಾಲೂಕು ಗಂಗಾಮತಸ್ಥರ ಸಮಾಜದ ಅಧ್ಯಕ್ಷ ಚಿದಂಬರ ಹೂವಿನ ಕಣೆ ತಿಳಿಸಿದರು.
ತಾಲೂಕಿನ ಅಮ್ಮನಘಟ್ಟ ಸಭಾಭವನ ಕೋಡೂರಿನಲ್ಲಿ ತಾಲೂಕು ಗಂಗಾಮತಸ್ಥರ ಸಮಾಜ ಹಾಗೂ ತಾಲೂಕು ಗಂಗಾಮತಸ್ಥರ ನೌಕರರ ಕ್ಷೇಮಾಭಿವೃದ್ಧಿ ಸಂಘ ದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಗೌರವ ಸಮರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ಸಮಾಜವು ಬಲಿಷ್ಠವಾಗಬೇಕಾದರೆ ಶಿಕ್ಷಣ ಅತಿ ಮುಖ್ಯವಾಗಿ ಬೇಕಾಗುತ್ತದೆ ಶಿಕ್ಷಣದಿಂದ ಮಾತ್ರ ಸಮಾಜವು ಬದಲಾವಣೆಯಾಗಲು ಸಾಧ್ಯ ಎಂದರು. ಸಮಾಜದ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎನ್ನುವ ಉದ್ದೇಶದಿಂದ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಕಳೆದ ವರ್ಷದ ಶೈಕ್ಷಣಿಕ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪಿಯುಸಿಯಲ್ಲಿ ಅಧಿಕ ಅಂಕವನ್ನು ಪಡೆದುಕೊಂಡಿರುವ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ಅಲ್ಲದೆ ಸಮಾಜದ ಏಳಿಗೆಗೆ ಸಂಘುವು ನಿರಂತರವಾಗಿ ಶ್ರಮಿಸುವ ಕೆಲಸವನ್ನು ಮಾಡಲಿದ್ದು ಅದಕ್ಕೆ ಸಮಾಜದ ಪ್ರತಿಯೊಬ್ಬರು ಸಹಕಾರವನ್ನು ನೀಡಬೇಕೆಂದು ಈ ಸಂದರ್ಭದಲ್ಲಿ ಮಾನವಿಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆಆರ್ ಧರ್ಮಪ್ಪ,ಕಲಗೋಡು ರತ್ನಾಕರ್, ಗಂಗಾಧರ್ ಕೆ, ಉಮೇಶ್ ಕೆ ವೈ, ಡಿ ಬಿ ಚಂದ್ರಪ್ಪ, ಚಂದ್ರಶೇಖರ್, ಸತ್ಯನಾರಾಯಣ, ಗಣಪತಿ, ಬೆನಕಪ್ಪ, ನಾಗೇಶ್ ಚಂದಳ್ಳಿ, ಮೇಘರಾಜ್, ಹಾಲೇಶಪ್ಪ, ಲೀಲಾವತಿ ನಾಗರಾಜ್, ಸರಸ್ವತಿ ಗಣಪತಿ ಮುಂತಾದವರು ಪಾಲ್ಗೊಂಡಿದ್ದರು..
AMMANAGATTA
Discover more from Prasarana news
Subscribe to get the latest posts sent to your email.
