KUWJ:ಎಷ್ಟೇ ಹೊಸ ತಂತ್ರಜ್ಞಾನ ಅಳವಡಿಸಿಕೊಂಡರು ಪತ್ರಿಕೋದ್ಯಮದ ಮೂಲ ಆಶಯ ಬದಲಾಗದು: ಭರತ್ ರಾಜ್

ಹೊಸನಗರ: ಪತ್ರಿಕಾ ಕ್ಷೇತ್ರದಲ್ಲಿ ಎಷ್ಟೇ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡರು ಪತ್ರಿಕೋದ್ಯಮದ ಮೂಲ ಆಶಯ ಮಾತ್ರ ಎಂದಿಗೂ ಬದಲಾಗುವುದಿಲ್ಲ ಎಂದು ಹೊಸನಗರ ತಾಲೂಕು ದಂಡಾಧಿಕಾರಿಗಳಾದ ಭರತ್ ರಾಜ್ ತಿಳಿಸಿದರು.
ಪಟ್ಟಣದ ಸೀತಾರಾಮಚಂದ್ರ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹೊಸನಗರ ಶಾಖೆ ಏರ್ಪಡಿಸಲಾಗಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಸಮಾಜಕ್ಕೆ ಸರಿಯಾದ ಮಾರ್ಗದರ್ಶನವನ್ನು ನೀಡುವುದರಲ್ಲಿ ಪತ್ರಿಕೋದ್ಯಮದ ಪಾತ್ರ ಅತ್ಯಂತ ಪ್ರಮುಖವಾದುದು ಸ್ವತಂತ್ರ ಸಂಗ್ರಾಮದ ಸಂದರ್ಭದಲ್ಲಿ ಲೋಕಮಾನ್ಯ ತಿಲಕರ ಮರಾಠ ಮತ್ತು ಕೇಸರಿ ಪತ್ರಿಕೆಗಳು ದೇಶಭಕ್ತಿಯ ಕಿಚ್ಚನ ಹೆಚ್ಚಿಸಿದ್ದು ಭಗತ್ ಸಿಂಗರ ಲೇಖನಗಳು ಜನರಲ್ಲಿ ದೊಡ್ಡಮಟ್ಟದ ಜಾಗೃತಿಯನ್ನು ಮೂಡಿಸಿದವು. ಪತ್ರಿಕೆಗಳು ಮತ್ತು ಪತ್ರಕರ್ತರು ಕೇವಲ ಸುದ್ದಿಯನ್ನಷ್ಟೇ ನೀಡುವುದಕ್ಕೆ ಸೀಮಿತವಾಗಿಲ್ಲ ಬದಲಿಗೆ ಸಮಾಜವನ್ನು ತಿದ್ದುವ ಕೆಲಸವನ್ನು ಸಹ ಅವರು ಮಾಡುತ್ತಿದ್ದಾರೆ ಎಂದರು.
ಪತ್ರಿಕೆಗಳನ್ನು ಓದುವುದರಿಂದ ಚಿಂತನಾಶಕ್ತಿ ವೃದ್ಧಿಯಾಗುತ್ತದೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಬೇರೆ ಬೇರೆ ತಂತ್ರಜ್ಞಾನಗಳು ಹೆಚ್ಚಾದರೂ ಸಹ ಪತ್ರಿಕೋದ್ಯಮ ತನ್ನ ಮೂಲ ಉದ್ದೇಶವನ್ನು ಬದಲಾಯಿಸಿಕೊಂಡಿಲ್ಲ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಸಾಧಕರಾದ ವಿಜಯವಾಣಿ ವರದಿಗಾರ ಚಿದಾನಂದ ಸ್ವಾಮಿ ವಿಜಯವಾಣಿ ಪತ್ರಿಕೆ ವಿತರಕ ವಿಜೇಂದ್ರ ಪ್ರಭು, ಶಿವಕುಮಾರ್, ಹಿರಿಯ ಪತ್ರಕರ್ತ ವೇಣುಗೋಪಾಲ್ ಹಾಗೂ ಮನ್ಸೂರ್ ಅಹಮದ್ ಅವರನ್ನು ಸನ್ಮಾನಿಸಲಾಯಿತು ಜೊತೆಗೆ ಇತ್ತೀಚಿಗಷ್ಟೇ ಮೃತಪಟ್ಟ ಮಾರುತಿಪುರ ವಿಜಯವಾಣಿ ವಿತರಕರಾದ ಶಂಕರ್ ಶೆಟ್ಟಿ ಕುಟುಂಬಕ್ಕೆ 10 ಸಾವಿರ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಹೊಸನಗರ ತಾಲೂಕು ಅಧ್ಯಕ್ಷರಾದ ನಾ ರಾವಿ ಪ್ರಧಾನ ಕಾರ್ಯದರ್ಶಿ ಅಶ್ವಿನಿ ಪಂಡಿತ್, ರಾಜ್ಯ ನಿರ್ದೇಶಕ ಏನ್ ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಹುಚ್ಚರಾಯಪ್ಪ, ಟಿ ಸತ್ಯನಾರಾಯಣ, ಜಿಲ್ಲಾ ಸಮಿತಿ ನಿರ್ದೇಶಕ ರವಿ ಬಿದನೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಚಿದಂಬರ ಹೂವಿನ ಕೋಣೆ ಮುಂತಾದವರು ಉಪಸ್ಥಿತರಿದ್ದರು.

KUWJ..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading