
ರಿಪ್ಪನ್ ಪೇಟೆ: ಸಮೀಪದ ಬಟಾಣಿಜೆಡ್ಡು ಗ್ರಾಮದ ಬಳಿ ಹಾದುಹೋಗಿರುವ ರೇಲ್ವೆ ಹಳಿಯ ಕಂಬಿಗಳ ಬದಿಯಲ್ಲಿ ಅಪರಿಚಿತ ವೃದ್ಧನ ಶವ ಶುಕ್ರವಾರ ಪತ್ತೆಯಾಗಿದೆ.
ಮೃತ ವ್ಯಕ್ತಿಸಂಜೆ ನಾಲ್ಕು ಗಂಟೆಗೆ ಸಂಚರಿಸುವ ಮೈಸೂರು -ತಾಳಗುಪ್ಪ ಎಕ್ಸಪ್ರೆಸ್ ರೈಲಿಗೆ ಸಿಲುಕಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗುತ್ತಿದೆ.
ಪ್ರಾಥಮಿಕ ಮಾಹಿತಿಯಂತೆ, ಮೃತ ವ್ಯಕ್ತಿಯ ಜೇಬಿನಲ್ಲಿ ಕುಂಸಿ ನಿಲ್ದಾಣದ ರೈಲು ಟಿಕೆಟ್ ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಅವರು ರೈಲಿನಲ್ಲಿ ಪ್ರಯಾಣಿಸುವ ವೇಳೆಯಲ್ಲಿ ಜಾರಿ ಬಿದ್ದಿರಬಹುದು ಅಥವಾ ರೈಲಿಗೆ ಸಿಲುಕಿ ಮೃತಪಟ್ಟಿರಬಹುದು ಎಂಬ ಸಾಧ್ಯತೆಗಳಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ರಿಪ್ಪನ್ ಪೇಟೆ ಪೋಲಿಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಮೃತ ವ್ಯಕ್ತಿಯ ಪತ್ತೆಗಾಗಿ ಪೋಲಿಸರು ತನಿಖೆ ಬಳಿಕ ತಿಳಿಯಲಿದ್ದು. ರೇಲ್ವೆ ಪೋಲಿಸರು ಮುಂದಿನ ಕ್ರಮ ಕೈಗೋಳ್ಳಲಿದ್ದಾರೆ.
DEAD BODY...
Discover more from Prasarana news
Subscribe to get the latest posts sent to your email.
