
ಹೊಸನಗರ: ತಾಲೂಕಿನ ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದ ಪಟ ಗುಪ್ಪ ಸೇತುವೆ ಬಳಿ ಶರಾವತಿ ನೀರಿನ ಪ್ರದೇಶದಲ್ಲಿ ಮಾಂಸಕ್ಕಾಗಿ ಗೋವನ್ನ ಹತ್ಯೆ ಮಾಡಿ ಘಟನೆ ಬೆಳಕಿಗೆ ಬಂದ ಬಳಿಕ ಆರೋಪಿಗಳು ತಲೆಮೆರೆಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ, ಜಿಲೆ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ, ಜಿಲೆ.., ಮಾನ್ಯ ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ ರವರ ಮಾರ್ಗದರ್ಶನದಲಿ,, ಶ್ರೀ ಎಂ.ಐ ಗೌಡಪ್ಪಗೌಡ, ಪೊಲೀಸ್ ವೃತ್ತ ನಿರೀಕ್ಷಕರು, ಹೊಸನಗರ ವೃತ್ತ ರವರ ನೇತೃತ್ವದಲ್ಲಿ ಹೊಸನಗರ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ಶಂಕರಗೌಡ ಪಾಟೀಲ್, ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ರಾಜುರೆಡ್ಡಿ ಹಾಗೂ ನಗರ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಶ್ರೀ ಶಿವಾನಂದ ವೈ ಕೆ ಹಾಗೂ ಸಿಬ್ಬಂದಿಯವರಾದ ಶ್ರೀ ಕಿರಣ್ ಕುಮಾರ್ ಡಿ.ವೈ, ಹೆಚ್.ಸಿ, ಶ್ರೀ ಶಿವಕುಮಾರನಾಯ್ಕ, ಹೆಚ್.ಸಿ, ಶ್ರೀ ಮಾಯಪ್ಪ ಗೋಕಾವಿ, ಸಿಪಿಸಿ , ಶ್ರೀ ರವಿಚಂದ್ರ, ಸಿಪಿಸಿ , ಶ್ರೀ ಸುನಿಲ್ ಸಿಪಿಸಿ , ಶ್ರೀ ಗೋಪಾಲಕೃಷ್ಣ, ಸಿಪಿಸಿ , ಶಿವಮೊಗ್ಗ, ಎ.ಎನ್.ಸಿ ವಿಭಾಗದ ಶ್ರೀ ಗುರುರಾಜ ಮತ್ತು ಶ್ರೀ ಇಂದ್ರೇಶ ರವರುಗಳ ಸಹಕಾರದಿಂದ ದಿನಾಂಕ: 04/07/2026 ರಂದು ಆರೋಪಿತರಾದ ಎ1) ಮಹಮದ್ ಸಲೀಂ ಬಾಳೂರ್ ಬಿನ್ ಹಜರತ್ ಸಾಬ್, (34) ಎ2) ಮಕಬುಲ್ ಅಹ್ಮದ್ ಬಡಿಗೇರ ಬಿನ್ ಮಹಮದ್ ಖಾಸಿಂ, (22), ಎ3) ಸುಲೇಮಾನ್ ಕೊಲಾರಿ ಬಿನ್ ಖಾಸಿಂ ಸಾಬ್, 26 ವರ್ಷ,ಎ4) ಮಲ್ಲಿಕ್ ರಿಹಾನ್ ಸುರಳೇಶ್ವರ ಬಿನ್ ಮಕಬುಲ್ ಸಾಬ್, 25 ನನ್ನು ಬಂಧಿಸಲಾಗಿದ್ದು
ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ
HOSANAGARA POLICE..
Discover more from Prasarana news
Subscribe to get the latest posts sent to your email.
