
ಹೊಸನಗರ: ಕಳೂರು ಶ್ರೀರಾಮೇಶ್ವರ ಪಿಎಸಿಎಸ್ ಹೊಸನಗರ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಕಾರದಿಂದ ರಾಜರತ್ನ ಇವೆಂಟ್ಸ್ ಹಾಗೂ ಜನಸ್ನೇಹಿ ಂಟ್ಸ್ ಇವರ ಸಹಯೋಗದಲ್ಲಿ ಬೃಹತ್ ಹಲಸು ಮತ್ತು ಆಹಾರಮೇಳವನ್ನು ಜುಲೈ 3,4 ಮತ್ತು 5ನೇ ತಾರೀಕಿನಂದು ಹೊಸನಗರದಲ್ಲಿ ಆಯೋಜಿಸಲಾಗಿದೆ ಎಂದು ಕಳುರು ಶ್ರೀರಾಮೇಶ್ವರ ಪಿ ಎ ಸಿ ಎಸ್ ನ ಅಧ್ಯಕ್ಷರಾದ ವಿನಯ್ ಕುಮಾರ್ ದುಮ್ಮ ತಿಳಿಸಿದರು.
ಈ ಕುರಿತಾಗಿ ಚೌಡಮ್ಮ ರಸ್ತೆಯಲ್ಲಿರುವ ಕೊಳೂರು ಸಹಕಾರಿ ಸಂಘದ ನೂತನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿಯನ್ನು ನೀಡಿದ ಅವರು ಹೊಸನಗರದ ಚೌಡೇಶ್ವರಿ ರಸ್ತೆಯ, ಬಸ್ ಸ್ಟ್ಯಾಂಡ್ ಹತ್ತಿರವಿರುವ ವಜ್ರಮಹೋತ್ಸವ ಕಟ್ಟಡದಲ್ಲಿ (ಕಳೂರು ಸೊಸೈಟಿ, ನೂತನ ಕಟ್ಟಡ) ನಡೆಯಲಿದೆ. ಮೇಳವು ಮೂರು ದಿನಗಳ ಕಾಲ ಬೆಳಿಗ್ಗೆ 9.30 ರಿಂದ ರಾತ್ರಿ 9.30 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ರಾಜರತ್ನ ಇವೆಂಟ್ಸ್ನ ಮುಖ್ಯಸ್ಥರಾದ ಪ್ರಭಾಕರ್ ಮಂದಾರ್ತಿ ಈ ಒಂದು ಹಲಸಿನ ಮೇಳದಲ್ಲಿ ಹಲಸಿನ ಹಣ್ಣಿನ ವೈವಿಧ್ಯಮಯ ತಿನಿಸುಗಳದ ಹಲಸಿನ ಪೋಡಿ, ಕಡುಬು, ಕಟ್ಲೆಟ್, ಕಬಾಬ್, ಚಿಲ್ಲಿ, ಶೀರ, ಬಿರಿಯಾನಿ, ಮಂಚೂರಿ, ಪತ್ರೊಡೆ, ಪಾಯಸ, ಜಿಲೇಬಿ, ಹೋಳಿಗೆ, ಮುಳ್ಕ ಮತ್ತು ಐಸ್ ಕ್ರೀಮ್‌ಗಳಂತಹ ತಿನಿಸುಗಲಿದ್ದು
ಕೃಷಿ ಮತ್ತು ಗೃಹೋಪಯೋಗಿ ಉತ್ಪನ್ನಗಳದ ಖಾದಿ ಬಟ್ಟೆಗಳು, ಅಲಂಕಾರಿಕ ವಸ್ತುಗಳು, ಗೃಹಬಳಕೆಯ ವಸ್ತುಗಳು, ಗೋ ಉತ್ಪನ್ನಗಳು, ವಿವಿಧ ಬಗೆಯ ಉಪ್ಪಿನಕಾಯಿಗಳು, ಸುಂದರ ಶಿಲಾಮೂರ್ತಿಗಳು, ಸೀರೆಗಳು, ಆಂಟಿಕ್ ವಸ್ತುಗಳು, ಹಪ್ಪಳ ಮತ್ತು ಸಂಡಿಗೆ, ಮಸಾಲೆ ಉತ್ಪನ್ನಗಳು ಹಾಗೂ ಆದಿವಾಸಿ ಹೇರ್ ಆಯಿಲ್ ಮತ್ತು 1 ಗ್ರಾಂ ಗೋಲ್ಡ್ ಆಭರಣಗಳು ಮಾರಾಟಕ್ಕಿರುತ್ತವೆ ಅಲ್ಲದೆ ಗಿಡ ಮತ್ತು ಬೀಜಗಳ ಮಾರಾಟವಿದ್ದು ಮೇಳದಲ್ಲಿ ಹಲಸು, ಮಾವು, ಹೂವಿನ ಗಿಡಗಳು ಮತ್ತು ತರಕಾರಿ ಬೀಜಗಳು ದೊರೆಯಲಿವೆ ಜೊತೆಗೆ ಹಳೆಯ ಜರಿ (ರೇಷ್ಮೆ) ಸೀರೆಗಳನ್ನು ಖರೀದಿಸಿ ತಕ್ಷಣ ಹಣ ನೀಡುವ ಸೌಲಭ್ಯವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು
HALASU MELA..
Discover more from Prasarana news
Subscribe to get the latest posts sent to your email.
