RESTORATION:ಶೇಡಿನ ಕೆರೆ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ..

ಹೊಸನಗರ: ತಾಲೂಕಿನ ಅಲಗೇರಿ  ಮಂಡ್ರಿ ಗ್ರಾಮದ ಶೇಡಿನ ಕೆರೆ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆಯನ್ನು ಭಾನುವಾರ ನೀಡಲಾಯಿತು.
ಸಾರಾ ಸಂಸ್ಥೆ ದೊಂಬೆಕೊಪ್ಪ, ಶೇಡಿನ ಕೆರೆ ಜೀರ್ಣೋದ್ಧಾರ ಸಮಿತಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಸಹಯೋಗದೊಂದಿಗೆ ಕೆರೆಯ ಜೀರ್ಣೋದ್ಧಾರ ಕಾರ್ಯ ಆರಂಭವಾಗಿದೆ.
ಕಾಮಗಾರಿ ಚಾಲನೆ ಬಳಿಕ ಮಾತನಾಡಿದ ಕೆರೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದೇವೇಂದ್ರಪ್ಪ ಗೌಡ ಹರಿದ್ರಾವತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲಗೇರಿ ಮಂಡ್ರಿ ಗ್ರಾಮದ ಸರ್ವೆ ನಂಬರ್ 16ರಲ್ಲಿರುವ ಶೇಡಿನ ಕೆರೆ ಹಲವಾರು ವರ್ಷಗಳಿಂದ ಅಪಾರವಾದ ಹುಳು ತುಂಬಿಕೊಂಡು ಕೆರೆಯಲ್ಲಿ ಇತ್ತೀಚಿನ ದಿನಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗಿದೆ ಇದರಿಂದ ಈ ಕೆರೆಯನ್ನು ಆಶ್ರಯಿಸಿರುವ ರೈತರಿಗೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಪ್ರಾಣಿ ಪಕ್ಷಿಗಳಿಗೆ ಬಹಳಷ್ಟು ತೊಂದರೆ ಆಗಿದೆ ಇದೀಗ ಜಿಲ್ಲೆಯ ಬಹಳಷ್ಟು ಕೆರೆಗಳ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿ ಯಶಸ್ವಿಯಾಗಿರುವ ಸಾರಾ ಸಂಸ್ಥೆ ನಮ್ಮೂರಿನ ಕೆರೆಯ ಜೀವನೋದ್ಧಾರಕ್ಕೆ ಸಹಕಾರವನ್ನು ನೀಡಿದ್ದು ಇದಕ್ಕೆ ಈ ಭಾಗದ ಗ್ರಾಮಸ್ಥರ ಸಹಕಾರವು             ದೊರುತ್ತಿರುವುದು ಕೆರೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದರು ಈ ಸಂಧರ್ಭದಲ್ಲಿ ಕೆರೆ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ರವಿ, ಸುರೇಶ, ಉಮೇಶ, ಶೇಖರ, ಷಣ್ಮುಖ, ನಾಗಪ್ಪ, ಮಂಜು,ಆಪರೇಟರ್ ಶರಣಗೌಡ ಮತ್ತು ಸಾರ ಸಂಸ್ಥೆಯ ಧನುಷ್ ಕುಮಾರ್, ಕುಮಾರ್ ಸುತ್ತಲಿನ ಗ್ರಾಮಸ್ಥರು ಜೊತೆಗಿದ್ದರು.

RESTORATION..


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading