DRUG SHORTAGE:ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ; ಸೂಕ್ತ ಕ್ರಮಕ್ಕೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ಜಿಲ್ಲಾ ಅಧ್ಯಕ್ಷ ಆಗ್ರಹ..

ಹೊಸನಗರ;ರಾಜ್ಯದಲ್ಲಿ ಬಹುತೇಕ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷದಿಗಳು ಖಾಲಿಯಾಗಿದ್ದು  ರಾಜ್ಯ ಸರ್ಕಾರದ ನಿರ್ಲಕ್ಷದಿಂದ ಬಡ ರೋಗಿಗಳು ಪರದಾಡುವಂತಗಿದ್ದು   ಇದು ನಮ್ಮ ಸರ್ಕಾರಿ ಆಸ್ಪತ್ರೆಯ ಚಿತ್ರಣ. ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುವ ಸರ್ಕಾರಿ ಆಸ್ಪತ್ರೆ ವೈದ್ಯರು ಹೊರ ಮೆಡಿಕಲ್ ಅಂಗಡಿಗಳಿಗೆ ಬರೆದರೆ ಎಚ್ಚರ ಎನ್ನುವ ಸರ್ಕಾರ “ಹೊರಗೆ ಔಷದಿ ಬರೆಯುವ ಹಾಗಿಲ್ಲ ಒಳಗೆ ಔಷದ ಇಲ್ಲ”ಎನ್ನುವ ಸಂಧಿಗ್ದ ಸ್ಥಿತಿಯಲ್ಲಿ ವೈದ್ಯರಿದ್ದಾರೆ .
ಬಡವರಿಗಾಗಿ ನಿರ್ಮಿತವಾದ ಸರ್ಕಾರಿ ಆಸ್ಪತ್ರೆಗಳು ಚಿಕಿತ್ಸೆ ನೀಡುವ ಕೇಂದ್ರಗಳ ಬದಲಾಗಿ ಹೊರಗಡೆ ಔಷದ ಬರೆಯುವ ಕೇಂದ್ರಗಳಾಗಿ ಮಾರ್ಪಟ್ಟಿದೆ.
ಇದು ಕೇವಲ ಔಷದ ಕೊರತೆ ಮಾತ್ರವಲ್ಲ ಬಡ ಜನರ ಅರೋಗ್ಯದೊಂದಿಗೇ ನಡೆಯುತ್ತಿರುವ ಅನ್ಯಾಯ .

ಸರ್ಕಾರದ ಆದೇಶದಂತೆ ವೈದ್ಯರು ರೋಗಿಗಳಿಗೆ ಹೊರಗಡೆಯ ಮೆಡಿಕಲ್ ಅಂಗಡಿಗಳಿಗೆ ಔಷದಿಗಳನ್ನು ಬರೆಯುವಂತಿಲ್ಲ ಆಸ್ಪತ್ರೆ ಒಳಗೆ ಔಷದಿ ಇಲ್ಲ ಇವೆಲ್ಲ ಪರಿಣಾಮಗಳು ನೇರವಾಗಿ ಬಡ ರೋಗಿಗಳ ಮೇಲೆ ಬೀಳುತ್ತಿರುವುದರಿಂದ ಕೂಡಲೇ ಸರ್ಕಾರ ಇತ್ತ ಕಡೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತ್ತೆ ಶಿವಮೊಗ್ಗ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷರಾದ ಎಂ. ಎನ್. ಸುಧಾಕರ್ ಅಗ್ರಹಿಸಿದ್ದಾರೆ

DRUG SHORTAGE...


Discover more from Prasarana news

Subscribe to get the latest posts sent to your email.

Leave a Reply

Discover more from Prasarana news

Subscribe now to keep reading and get access to the full archive.

Continue reading