
ಹೊಸನಗರ: ಕ್ರೀಡೆಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದ್ದು ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗೂ ವಿದ್ಯಾರ್ಥಿಗಳು ಮಹತ್ವವನ್ನು ನೀಡಬೇಕು ಎಂದು ಹೊಸನಗರ ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್ ನ ಅಧ್ಯಕ್ಷರಾದ ಎಂಎನ್ ಸುಧಾಕರ್ ತಿಳಿಸಿದರು.
ಹೊಸನಗರ ನೆಹರು ಮೈದಾನದಲ್ಲಿ ನೆಹರು ಯುವ ಕೇಂದ್ರ ಶಿವಮೊಗ್ಗ ಹಾಗೂ ಜಿಮ್ಮಿ ಜಾರ್ಜ್ ವಾಲಿಬಾಲ್ ಕ್ಲಬ್ ಹೊಸನಗರ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜನೆಗೊಂಡಂತಹ ತಾಲೂಕು ಮಟ್ಟದ ಕ್ರೀಡಾಕೂಟ 2024-25 ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡಾಕೂಟಗಳಲ್ಲಿ ಗೆಲುವು ಸೋಲು ಸಹಜ ಎರಡನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಕ್ರೀಡಾಪಟುಗಳಲ್ಲಿ ಇರಬೇಕು ಜೊತೆಗೆ ತೀರ್ಪುಗಾರರ ತೀರ್ಪನ್ನ ಗೌರವಿಸುವ ಕೆಲಸವನ್ನು ಮಾಡಬೇಕು ಶಿಕ್ಷಣದಂತೆ ಕ್ರೀಡೆಯು ಸಹ ವಿದ್ಯಾರ್ಥಿ ಜೀವನದ ಬಹು ಮುಖ್ಯ ಅಂಗವಾಗಿರುತ್ತದೆ ಕ್ರೀಡಾಪಟುಗಳು ದುಶ್ಚಟಗಳಿಗೆ ದಾಸರಾಗದೆ ಕ್ರೀಡೆಯನ್ನ ರೂಡಿಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮವಾದಂತಹ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದರು
ಈ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಾದ ಉಲ್ಲಾಸ್, ಜಿಮ್ಮಿ ಜಾರ್ಜ್ ಸಂಸ್ಥೆಯ ಸದಸ್ಯರಾದ ಕೆ ಇಲಿಯಾಸ್, ರವಿಕುಮಾರ್, ಗಣೇಶ್, ಅಖಿಲೇಶ್, ದೈಹಿಕ ಶಿಕ್ಷಕರಾದ ಸುಹಾಸ್ ಉಪಸ್ಥಿತರಿದ್ದರು.
SPORTS MEET...
Discover more from Prasarana news
Subscribe to get the latest posts sent to your email.
