
ಹೊಸನಗರ: ಸಾಧಿಸುವ ಛಲವೊಂದಿದ್ದರೆ ಏನನ್ನ ಬೇಕಾದರೂ ಸಾಧಿಸಬಹುದು ಅದಕ್ಕೆ ಬಡತನ ಸೇರಿ ಯಾವುದೇ ಅಡೆತಡೆಗಳು ಲೆಕ್ಕಕ್ಕೆ ಬಾರದು ಎಂಬ ಮಾತಿಗೆ ಉತ್ತಮ ಉದಾಹರಣೆಯಂತೆ ಹೊಸನಗರ ಪಟ್ಟಣ ವ್ಯಾಪ್ತಿಯ ನಿವಾಸಿಗಳಾದ ಪ್ರವೀಣ್ ಎಸ್ ಪಿ ಹಾಗೂ ಪ್ರತಿಭಾ ಎಸ್ ಪಿ ಸಹೋದರ-ಸಹೋದರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಯನ್ನ ಅಲಂಕರಿಸುವ ಮೂಲಕ ಸಾಧಿಸಿ ತೋರಿಸಿದ್ದಾರೆ.
ಕಡು ಬಡತನ ತಂದೆಯ ಆರೋಗ್ಯ ಸಮಸ್ಯೆ ತಾಯಿ ಆಗಲಿಕೆ ಇವೆಲ್ಲ ಕಷ್ಟಗಳ ನಡುವೆ ಹೊಸನಗರ ಪಟ್ಟಣ ವ್ಯಾಪ್ತಿಯ ಪ್ರಭಾಕರ್ ಮತ್ತು ಮೂಕಾಂಬಿಕಾ ದಂಪತಿಗಳ ಮಕ್ಕಳಾದ ಇವರು ಪಿಎಸ್ಐ ಹುದ್ದೆಯನ್ನು ಅಲಂಕರಿಸುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಪ್ರವೀಣ್ ಎಸ್ ಪಿ ಶಿಕ್ಷಣವನ್ನು ಆರಂಭಿಸಿ ಶಿಕ್ಷಣದ ನಡುವೆ ಪತ್ರಿಕಾ ವಿತರಣೆ ಹಾಲು ಮಾರಾಟ ಕೂಲಿ ಕೆಲಸ ವನ್ನ ಮಾಡುತ್ತಾ ತಂದೆ ತಾಯಿಗೆ ಹೋರೆಯಾಗದೆ ಶಿಕ್ಷಣವನ್ನ ಮುಗಿಸಿ ತಮ್ಮ ಹದಿನಾರನೆಯ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿ 2002ರಿಂದ 2018 ರವರೆಗೆ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತಿಯ ಬಳಿಕ ಅಚೀವರ್ಸ್ ಅಕಾಡೆಮಿ ಶಿವಮೊಗ್ಗದಲ್ಲಿ ಒಂದು ವರ್ಷಗಳ ಕಾಲ ತರಬೇತಿಯನ್ನು ಪಡೆದು ಬಳಿಕ ಸುಮಾರು 10 ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ ಬಳಿಕ 2020ರಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾದರೂ ಕಲಬುರ್ಗಿಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದು ದಾವಣಗೆರೆ ಜಿಲ್ಲೆಯ ಹರಿಹರ ಗ್ರಾಮಾಂತರ ಮತ್ತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಪ್ರಸ್ತುತ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಹಾಗೆ ಕರ್ತವ್ಯವನ್ನ ನಿರ್ವಹಿಸುತ್ತಿದ್ದಾರೆ.
ಇವರಂತೆ ಇವರ ಸಹೋದರಿ ಪ್ರತಿಭಾ ಎಸ್ ಪಿ ಸಹ ಶಿಕ್ಷಣದ ಜೊತೆಗೆ ಕೆಲಸವನ್ನು ನಿರ್ವಹಿಸುತ್ತಾ ಪದವಿ ಶಿಕ್ಷಣವನ್ನು ಮುಗಿಸಿ ತಮ್ಮ ತಂದೆ ತಾಯಿಯ ಆಶಯದಂತೆ ಸರ್ಕಾರಿ ಹುದ್ದೆಯನ್ನು ಹೊಂದಬೇಕು ಎಂಬ ಮಾತಿನಂತೆ 2008ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗುತ್ತಾರೆ ಬಳಿಕ 2015 ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಪಿಎಸ್ಐ ಹುದ್ದೆಯನ್ನು ಹೊಂದುವ ಹಂಬಲವಿದ್ದ ಇವರು ತಮ್ಮ ಮಕ್ಕಳ ಆರೈಕೆಯ ಜೊತೆಗೆ ಪತಿ ಸುನಿಲ್ ಬೆಂಬಲ ಹಾಗೂ ಕಠಿಣ ಅಭ್ಯಾಸದೊಂದಿಗೆ 2025 ರಲ್ಲಿ ಪಿಎಸ್ಐ ಹುದ್ದೆಗೆ ಆಯ್ಕೆಯಾಗುತ್ತಾರೆ 03-01-2025 ರಾಷ್ಟ್ರದಲ್ಲಿ ಪಶ್ಚಿಮ ವಲಯ ಮಂಗಳೂರಿನಲ್ಲಿ ಕರ್ತವ್ಯಕ್ಕೆ ವರದಿಯನ್ನು ಮಾಡಿಕೊಂಡಿರುತ್ತಾರೆ.
ಇವರ ಈ ಸಾಧನೆಗೆ ತಂದೆ ತಾಯಿ ಹಾಗೂ ತಾಯಿಯ ಸಹೋದರರು ಬೆನ್ನೆಲುಬಾಗಿ ನಿಂತಿರುವುದು ಇಂದಿಗೂಅವರು ಸ್ಮರಿಸುತ್ತಾರೆ.
ನೂರಾರು ಯುವಕ ಯುವತಿಯರಿಗೆ ಮಾದರಿಯಾಗಿರುವ ಇವರು ಕಷ್ಟಗಳನ್ನೇ ಕಾರಣ ಮಾಡಿಕೊಳ್ಳದೆ ಕಷ್ಟಗಳೇ ಇಲ್ಲ ಅಂದುಕೊಂಡು ಪರಿಶ್ರಮದಿಂದ ಸಾಧಿಸಿದ್ದಾರೆ...
ACHIEVEMENT...
Discover more from Prasarana news
Subscribe to get the latest posts sent to your email.
